Home Advertisement
Home ತಾಜಾ ಸುದ್ದಿ ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೆ ಗೊತ್ತಿದೆ

ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೆ ಗೊತ್ತಿದೆ

0
95

ಮಂಗಳೂರು: ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೆ ಗೊತ್ತಿದೆ ಎಂದು ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಶಾಸಕ ಹರೀಶ್ ಪೂಂಜ ತಿರಗೇಟು ನೀಡಿದ್ದಾರೆ
ಪೇಜಾವರ ಶ್ರೀ ವಿರುದ್ಧದ ಬಿಕೆ ಹರಿಪ್ರಸಾದ್ ಹೇಳಿಕೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಖಂಡಿಸಿ ಮಂಗಳೂರಿನಲ್ಲಿ ಮಾತನಾಡಿ ಬಿ ಕೆ ಹರಿಪ್ರಸಾದ್‌ಗೆ ಒಂದು ಚುನಾವಣೆ ಗೆಲ್ಲೊ ಯೋಗ್ಯತೆ ಇಲ್ಲ, ಪುಡಿ ರಾಜಕಾರಣಿ ಬಿಕೆ ಹರಿಪ್ರಸಾದ್, ಹಿಂಬಾಗಿಲಿನ ಮೂಲಕ ಗಾಂಧೀ ಕುಟುಂಭದಲ್ಲಿ ಆತ್ಮೀಯರಾಗಿದ್ದುಕೊಂಡು ಅದನ್ನೇ ಬಂಡವಾಳ ಮಾಡಿ ರಾಜಕಾರಣ ಮಾಡಿದವರು, ನಿಮ್ಮ ಬಳಿ ರಾಜಕಾರಣದ ಯೋಗ್ಯತೆ ಇಲ್ಲ, ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಇಲ್ಲ, ಕೆಸರಿಯ ಬಗ್ಗೆ ಕಾವಿಯ ಬಗ್ಗೆ ಹರಿಪ್ರಸಾದ್‌ಗೆ ಯಾಕೆ ಗೌರವ ಇಲ್ಲ ಅಂದ್ರೆ, ಅವರ DNA ಯಲ್ಲಿ ಕೇಸರಿ ಇದೆಯಾ ಹಸಿರು ಇದೆಯಾ ನೋಡಬೇಕು ಅಥವಾ ಬಿಳಿ ಇದೆಯಾ ಎಂದು ನೋಡಬೇಕು ಅವರ DNA ಟೆಸ್ಟ್ ಮಾಡಿಸಬೇಕು, ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ವಿಶೇಷ ಗೌರವ ಇದೆ, ಗುರುಗಳನ್ನ ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ, ಬಿಕೆ ಹರಿಪ್ರಸಾದ್ ನಿಮಗೆ ತಾಕತ್ ಇದ್ರೆ ಮುಸಲ್ಮಾನ ಧರ್ಮ ಗುರುಗಳು, ಕ್ರೈಸ್ತ ಪಾದ್ರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲು ಸಾಧ್ಯ ಇದ್ಯಾ ? ಬಿ ಕೆ ಹರಿಪ್ರಸಾದ್ ಅವರ DNA ಟೆಸ್ಟ್ ಮಾಡಬೇಕು, ಹಿಂದೊಮ್ಮೆ ಅವರೇ ಹೇಳಿದ್ರು ಹಿಂದೂ ಮತ್ತು ಮುಸಲ್ಮಾನರ DNA ಒಂದೆ ಎಂದಿದ್ದರು, ಇದನ್ನ ನಾವು ಒಪ್ಪೋದಿಲ್ಲ ಹಿಂದೂಗಳ DNA ರಾಮನ ಹಾಗೂ ಕೃಷ್ಣನ DNA ನಿಮ್ಮ DNA ಯಾವುದು ಎಂದು ಟೆಸ್ಟ್ ಮಾಡಿಕೊಳ್ಳಿ, ಹಿಂದೂ DNA ಆಗಿದ್ರೆ ಹಿಂದೂ ಸ್ವಾಮೀಜಿಗಳ ಬಗ್ಗೆ ಈ ರೀತಿಯ ಹೇಳಿಕೆ ನೀಡುತ್ತಿರಲಿಲ್ಲ
ಸ್ವಾಮೀಜಿಗಳ ಹೇಳಿಕೆ ಅದು ಅವರ ವೈಯುಕ್ತಿಕ ಅಭಿಪ್ರಾಯ, ಅವರು ಎಲ್ಲಾ ಜಾತಿಗಳನ್ನ ಮೀರಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾರೆ,

ಮಂಗಳೂರಿನಲ್ಲಿ NIA ಸ್ಥಾಪಿಸಬೇಕು : ಲವ್ ಜಿಹಾದ್ ಪ್ರಕರಣಗಳನ್ನ NIA ತನಿಳೆಗೆ ವಹಿಸಬೇಕು, ಸುರತ್ಕಲ್ ಬ್ಲಾಕ್ ಮೇಲ್ ಆತ್ಮಹತ್ಯೆಗೆ ಯತ್ನ ಪ್ರಕರಣದಲ್ಲಿ ಸ್ಟೇಷನ್ ಬೇಲ್ ಆಗೋ ಸೆಕ್ಷನ್ ಹಾಕಿದ್ದಾರೆ, ಈ ಹಿನ್ನೆಲೆ ಲವ್ ಜಿಹಾದ್ ವಿರುದ್ಧ ಪ್ರತ್ಯೇಕ ಕಾನೂನು ಜಾರಿಯಾಗಬೇಕು, ಈ ಪ್ರಕರಣಗಳನ್ನ NIA ತನಿಖೆಗೆ ವಹಿಸಬೇಕು, NIA ನ ಶಾಖೆಯನ್ನ ಮಂಗಳೂರಿನಲ್ಲಿ ಸ್ಥಾಪಿಸಬೇಕು.

Previous articleಯುದ್ಧ ವಿಮಾನ ತಯಾರಿಕ ಘಟಕ ಉದ್ಘಾಟಿಸಿದ ಮೋದಿ
Next articleವಿಜಯೇಂದ್ರ ನೇತೃತ್ವದ ಚುನಾವಣೆಯಲ್ಲಿ ಭಾಗವಹಿಸಲ್ಲ