ಕುಷ್ಟಗಿ:ಬಂಗಾರದ ಆಭರಣಗಳನ್ನು ಪಳಪಳನೆ ಹೊಳೆಯುವಂತೆ ಪಾಲಿಸ್ ಮಾಡಿಕೊಡುವುದಾಗಿ ನಂಬಿಸಿ ಎರಡು ತೋಲೆಯ ಬಂಗಾರದ ನೆಕ್ಲೇಸ್ ಕಳವು ಮಾಡಿ ಯಾಮಾರಿಸಿದ ಘಟನೆ ಕುಷ್ಟಗಿ ಪಟ್ಟಣದಲ್ಲಿ ಸಂಭವಿಸಿದೆ.
ಮುಲ್ಲಾರ ಓಣಿಯ ನಿವಾಸಿ ಬಾಬಾಸಾಬ ಮುಲ್ಲಾ ಅವರ ಮನೆಗೆ ಅಪರಿಚಿತರು ಬಂದು ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಬಣ್ಣ ಬಣ್ಣದ ಮಾತುಗಳಿಂದ ನಂಬಿಸಿ
ಬಂಗಾರ ಪಾಲಿಸ್ ಮಾಡಿಕೊಡುತ್ತೇವೆ ಎಂದು ನಂಬಿಸಿ ಮೊದಲಿಗೆ ಬೆಳ್ಳಿಯ ವಸ್ತುಗಳನ್ನು ಪಾಲಿಶ್ ಮಾಡಿಕೊಟ್ಟಿದ್ದಾರೆ.
ಮನೆಯಲ್ಲಿ ಬಂಗಾರದ ವಸ್ತುಗಳು ಇದ್ದರೆ ಕೊಡಿ ಅದನ್ನು ಸಹ ಪಾಲಿಸ್ ಮಾಡಿ ಕೊಡುವುದಾಗಿ ನಂಬಿಸಿ ಬಂಗಾರದ ಎರಡು ತೋಲೆಯ ಆಭರಣವನ್ನು
ಹೆಣ್ಣುಮಕ್ಕಳಿಂದ ಪಡೆದುಕೊಂಡು ಪಾಲಿಸ್ ಮಾಡುವ ನೆಪದಲ್ಲಿ ಹೆಣ್ಣು ಮಕ್ಕಳ ಕಣ್ಣು ತಪ್ಪಿಸಿ ಬಂಗಾರದ ನೆಕ್ಲೇಸ್ ಕದ್ದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ಮೌನೇಶ ರಾಠೋಡ್ ಭೇಟಿ ನೀಡಿ ಪರಿಶೀಲಿಸಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರು ತಮ್ಮ ಬೈಕ್ ನಲ್ಲಿ ತೆರಳುತ್ತಿರುವ ದೃಶ್ಯ ಮುಲ್ಲಾರ ಓಣಿಯ ಮಸೀದಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿವೆ.