ಪಾಕ್‌ಗೆ ಜೈಕಾರ ಹಾಕಿದರೆ ಗುಂಡಿಕ್ಕಿ ಕೊಲ್ಲಿ

ಮೈಸೂರು: ಭಾರತದಲ್ಲಿ ನಿಂತು ಪಾಕಿಸ್ತಾನಕ್ಕೆ ಜೈ ಅನ್ನುವವರನ್ನು ಗುಂಡಿಕ್ಕಿ ಕೊಲ್ಲಿ. ಶತ್ರು ರಾಷ್ಟçಕ್ಕೆ ಜೈಕಾರ ಹಾಕಿದರೆ ಅಂತವರನ್ನು ದೇಶದ್ರೋಹಿಗಳು ಎಂದು ಘೋಷಿಸಿ ಶಿಕ್ಷೆ ಕೊಡಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಯುದ್ದದ ವಾತಾವರಣ ಸೃಷ್ಟಿಯಾಗಿದೆ.ಇಡೀ ದೇಶ ಮೋದಿ ಅವರ ಪರ ನಿಲ್ಲಬೇಕಿದೆ. ಶತ್ರು ರಾಷ್ಟ್ರ ಪರ ಜೈಕಾರ ಕೂಗಿದವರನ್ನು ಸುಮ್ಮನೆ ಬಿಟ್ಟು ಕಳುಹಿಸುವುದು ಸರಿಯಲ್ಲ. ನಮ್ಮ ದೇಶದ ಅನ್ನ ತಿಂದು, ನಮ್ಮ ನೀರು ಕುಡಿದು ಶತೃ ರಾಷ್ಟಕ್ಕೆ ಜೈ ಅನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂತವರನ್ನು ಗುಂಡಿಕ್ಕಿ ಕೊಲ್ಲಿ ಎಂದರು.
ಜಾತಿಗಣತಿ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಣಯ ಸ್ವಾಗತರ್ಹ. ಎಲ್ಲಾ ಜಾತಿಯ ಮುಖಂಡರು ಜಾತಿ ಗಣತಿ ಸ್ವಾಗತಿಸಿದ್ದಾರೆ ಈಗ ರಾಜ್ಯದಲ್ಲಿ ನಡೆದ ಜಾತಿಗಣತಿ ವರದಿಯನ್ನು ಅಧಿಕೃತವಾಗಿ ಬಹಿರಂಗ ಪಡಿಸಬೇಕು. ಕೇಂದ್ರದ ಜಾತಿ ಗಣತಿಗೆ ವಿಶ್ವಾಸಾರ್ಹತೆ ಹೆಚ್ಚು. ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದವರನ್ನು ಕೂರಿಸಿ ಕೊಂಡು ಜಾತಿಗಣತಿ ಮಾಡಿಸಿ ಎಡವಟ್ಟುಗಳಾದವು. ಕಾಂತರಾಜ್ ವರದಿಯ ಮೂಲ ಪ್ರತಿ ಇಲ್ಲದೆ ಗಣತಿ ಹೇಗೆ ಮಾಡಲಾಯಿತು? ಕರ್ನಾಟಕದ ಜಾತಿಗಣತಿ ರಾಜಕೀಯಕರಣ ಗೊಂಡಿದೆ. ಜಾತಿಗಣತಿ ಟೀಂ ಒಂದು ರೀತಿ ಗಂಜಿ ಕೇಂದ್ರದ ಟೀಂ ಥರ ಆಗಿ ಹೋಯ್ತು. ತಜ್ಞರಲ್ಲದೆ ಇರುವವರನ್ನು ಜಾತಿಗಣತಿ ಟೀಂ ಗೆ ಹಾಕಿ ಕೊಂಡು ಎಡವಟ್ಟಾಯ್ತು ಎಂದು ಟೀಕಿಸಿದರು.
ಎಎಸ್ಪಿ ಮೇಲೆ ಸಿಎಂ ಕೈ ಎತ್ತಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸಲು ಹೋಗಿ ಏಕಾಂಗಿ ಆಗುತ್ತಿದ್ದಾರೆ. ಸಾರ್ವಜನಿಕವಾಗಿ ಸಿಎಂ ನಡವಳಿಕೆ ಸರಿ ಇಲ್ಲ. ಇದು ಯಾರು ಒಪ್ಪುವ ನಡೆಯಲ್ಲ ಎಂದು ಹೇಳಿದರು.