Home Advertisement
Home ತಾಜಾ ಸುದ್ದಿ ಪದ್ಮಣ್ಣವರ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಪದ್ಮಣ್ಣವರ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

0
107

ಬೆಳಗಾವಿ: ಬೆಳಗಾವಿಯ ಲೇವಾದೇವಿ ವ್ಯವಹಾರಗಾರ, ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಪದ್ಮಣ್ಣವರ ಪತ್ನಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಉಮಾ ಅವರಿಗೆ ನಿದ್ದೆ ಮಾತ್ರೆಯನ್ನು ತಂದು ಕೊಟ್ಟಿದ್ದ ಕೆಲಸದಾಳು ಮಂಜುನಾಥ ತೇರ್ಕಲ್ ಎಂಬುವನೇ ಬಂಧಿತ ಆರೋಪಿ. ಇದರಿಂದ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.
ಪದ್ಮಣ್ಣವರ ಸಾವಿನ ಬಗ್ಗೆ ಮಗಳು ಸಂದೇಹ ವ್ಯಕ್ತಪಡಿಸಿ ಮಾಳಮಾರುತಿ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಮಂಜುನಾಥ ತಲೆ ಮರೆಸಿಕೊಂಡಿದ್ದ. ನಿನ್ನೆ ರಾತ್ರಿ ಈತನನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಸಂತೋಷ ಪದ್ಮಣ್ಣವರ ಹತ್ತಿರ ಬಡ್ಡಿ ಮೇಲೆ ಸಾಲ ಪಡೆದವರ ಪಟ್ಟಿ ಈಗ ಮಾಳಮಾರುತಿ ಪೊಲೀಸರ ಕೈಗೆ ಸಿಕ್ಕಿದೆ, ಹೀಗಾಗಿ ಅವರನ್ನೂ ಕೂಡ ಮುಂದಿನ ದಿನಗಳಲ್ಲಿ ಕರೆದು ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಈ ಸಾಲ ಪಡೆದವರ ಪಟ್ಟಿಯಲ್ಲಿ ಕೆಲ ಗಣ್ಯರ ಹೆಸರುಗಳಿವೆ ಎಂದು ಗೊತ್ತಾಗಿದೆ.

Previous articleಯೋಗೇಶ್ವರ್ ಕಾಂಗ್ರೆಸ್‌ಗೆ ಬಂದರೆ ಸ್ವಾಗತ
Next articleಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿ ಬರಲಿ