ಪತ್ನಿಯಿಂದಲೇ ಕೊಲೆಯಾದ ಇಬ್ಬರ ಹೆಂಡಿರ ಪೊಲೀಸ್‌

0
17
ಪೊಲೀಸ್‌

ಬಳ್ಳಾರಿ: ಮೊದಲ ಹೆಂಡತಿ ಜೊತೆ ಸಂಬಂಧ ಉತ್ತಮಗೊಳ್ಳುವುದನ್ನು ಕಂಡ 2ನೇ ಹೆಂಡತಿ ಪೊಲೀಸ್ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಬುಧವಾರ ಬಳ್ಳಾರಿಯಲ್ಲಿ ನಡೆದಿದೆ.
ಚಿನ್ನಾಪುರ ಗ್ರಾಮದ ಜಾಫರ್ ಸಾಹಿಬ್ ಎಂಬ ಹೆಸರಿನ ಇಬ್ಬರ ಹೆಂಡಿರ ಮುದ್ದಿನ ಪೊಲೀಸ್ ದುಷ್ಕೃತ್ಯದಲ್ಲಿ ಪ್ರಾಣ ತೆತ್ತು ಮಸಣ ಸೇರಿದ್ದಾನೆ. ಮದುವೆಯಾಗಿ ಮಕ್ಕಳಿದ್ದರೂ ನರ್ಸ್ ಒಬ್ಬಳ ಪ್ರೀತಿಯಲ್ಲಿ ಬಿದ್ದ ಜಾಫರ್ ಮೊದಲ ಪತ್ನಿಯನ್ನ ಬಿಟ್ಟಿದ್ದ. ಈಗ ಅದೇ ನರ್ಸ್ ಈಗ ಪೇದೆಯನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.
ಮುಸ್ಲಿಂ ಧರ್ಮದ ಜಾಫರ್ ಮೊದಲು ನವೀನ್ ತಾಜ್ ಎಂಬಾಕೆಯನ್ನು ಮದುವೆ ಆಗಿದ್ದ. ಆಕೆಯ ಹೆರಿಗೆಗೆಂದು ಆಸ್ಪತ್ರೆ ಸೇರಿಸಿದಾಗ ಅಲ್ಲಿ ನರ್ಸ್ ಆಗಿದ್ದ ಹನುಮಕ್ಕ ಅವರನ್ನು ಪ್ರೇಮಪಾಶದಲ್ಲಿ ಕೆಡವಿ ಮದುವೆ ಆಗಿದ್ದ.

Previous articleಗಾಂಜಾ ಸೇವನೆ: ಐವರು ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲು
Next article`ಬೋಗಸ್ ಕಾರ್ಡ್ ನೆಪದ ಕಾಂಗ್ರೆಸ್’