ಪತ್ನಿಯ ಕೊಲೆ ಮಾಡಿದ ಪತಿ

0
25
Murder

ದಾವಣಗೆರೆ: ಅಡುಗೆ ಚೆನ್ನಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪತಿಯೇ ವಯೋವೃದ್ಧ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ರಾಮಕೃಷ್ಣ ಹೆಗಡೆ ನಗರದಲ್ಲಿ ನಡೆದಿದೆ.
ಅಖ್ತರ್ ರಜಾ಼ ಸರ್ಕಲ್‌ನ ರಿಂಗ್ ರಸ್ತೆಯ ಹೆಗಡೆ ನಗರದ ನಿವಾಸಿ ಶಾಕಿರಾ ಬೀ(70) ಕೊಲೆಯಾದ ವೃದ್ಧೆ. ಈಕೆಯ ಪತಿ ಚಮನ್ ಸಾಬ್ (80) ಕೊಲೆ ಮಾಡಿದ್ದಾನೆ. ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಕೀರಾ ಬೀ ಮತ್ತು ಚಮನ್ ಸಾಬ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ವೃದ್ಧ ಪತಿ-ಪತ್ನಿ ನಡುವೆ ಆಗಾಗ ಅಡುಗೆ ಇತರೆ ವಿಚಾರವಾಗಿ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ.
ಭಾನುವಾರ ಈದ್ ಮಿಲಾದ್ ಹಬ್ಬದ ದಿನ ಅಡುಗೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ಪತಿ ಚಮನ್ ಸಾಬ್ ಪತ್ನಿ ಶಾಕಿರಾ ಬೀ ಅವರನ್ನು ಕೊಲೆ ಮಾಡುವ ಮೂಲಕ ಅಂತ್ಯ ಕಂಡಿದೆ.

Previous article20ಕೋಟಿಯಲ್ಲಿ ನವಿಕೃತಗೊಂಡ ಧಾರವಾಡ ರೈಲ್ವೆ ನಿಲ್ದಾಣ ಹೇಗಿದೆ?
Next articleಚಿತ್ತ ಮಳೆ ಆರ್ಭಟಕ್ಕೆ ನಲುಗಿದ ಜನತೆ