ಪತ್ನಿಗೆ ಹಲ್ಲೆ ಮಾಡಿ ಪತಿ ಸಾವು, ಪತ್ನಿ ಆಸ್ಪತ್ರೆಗೆ ದಾಖಲು

0
9
ಸಾವು

ಮಂಗಳೂರು(ಬೆಳ್ತಂಗಡಿ): ಪತಿ-ಪತ್ನಿ ನಡುವೆ ಜಗಳ ನಡೆದು, ಪತಿ ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ಹತ್ತಿರ ಗಂಗೆತ್ಯಾರ್ ಎಂಬಲ್ಲಿ ನಡೆದಿದೆ.
ರಾಮಣ್ಣ ಗೌಡ ಮೃತಪಟ್ಟ ವ್ಯಕ್ತಿ. ಚೆನ್ನಕ್ಕ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತ್ನಿಯೊಂದಿಗೆ ಜಗಳವಾಡಿದ ರಾಮಣ್ಣ ಗೌಡ ಚೆನ್ನಕ್ಕನಿಗೆ ಹಲ್ಲೆ ನಡೆಸಿ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ರಕ್ತದ ಒತ್ತಡ ಹೆಚ್ಚಿದ ಪತಿ ಸಾವನ್ನಪ್ಪಿದ್ದಾರೆ. ಇವರಿಗೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleದಾಖಲೆ ಇಲ್ಲದ 13 ಲಕ್ಷ ರೂ. ವಶ
Next articleಅಪಾರ್ಟ್‌ಮೆಂಟ್‌ನಿಂದ ಬಿದ್ದು ಟೆಕ್ನಿಶಿಯನ್ ಸಾವು