ಶಿವಮೊಗ್ಗ: ಪತಿಯ ಸಾವಿನ ವಿಚಾರ ತಿಳಿದು ದುಃಖದಲ್ಲಿಯೇ ಮಹಿಳೆಯೋರ್ವಳು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಆಡುಗೋಡಿಯ ಕಲಾವತಿ ಎನ್ನುವವರ ಪತಿ ವೆಂಕಟೇಶ್ ಅನಾರೋಗ್ಯದಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಆದರೆ, ಪತಿಯ ಸಾವಿನ ಸುದ್ದಿ ತಿಳಿದ ತಕ್ಷಣವೇ ಮಂಗಳೂರಿಗೆ ಹೊರಡಬೇಕಿದ್ದ ಕಲಾವತಿ, ಅಲ್ಲಿಗೆ ಹೋಗದೆ ನೇರವಾಗಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ವೋಟ್ ಮಾಡಿ ಬಳಿಕ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
























