ಪಕ್ಷೇತರನಿಗೆ ಕಾಂಗ್ರೆಸ್ ಗಾಳ..!?

0
13
ಕಾಂಗ್ರೆಸ್‌

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ಕೌಂಟ್‌ಡೌನ್ ಶುರುವಾಗಿದ್ದು, ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ ಅವರಿಗೆ ಕಾಂಗ್ರೆಸ್ ಮುಖಂಡರು ಗಾಳ ಹಾಕಿದ್ದಾರೆ.
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೂ ಅದಕ್ಕೆ ಕೈ ಪಡೆಯ ಭರ್ಜರಿ ಪ್ಲ್ಯಾನ್ ಅಂಗವಾಗಿ ಈ ಗಾಳ ಎನ್ನಲಾಗಿದೆ. ಕುಂದಗೋಳ ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಜೊತೆಗೆ ಕಾಂಗ್ರೆಸ್ ಮುಖಂಡರು ಮಾತುಕತೆ ನಡೆಸಿ ಅತಂತ್ರ ಫಲಿತಾಂಶ ಬಂದು ಚಿಕ್ಕನಗೌಡ ಚುನಾಯಿತರಾದಲ್ಲಿ ತಮ್ಮ ಜೊತೆ ಕೈ ಜೋಡಿಸಬೇಕೆಂದು ಬೆಂಬಲ ಕೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ನಡುವೆ ನೇರಾನೇರ ಫೈಟ್ ಇದ್ದು, ಇತ್ತೀಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದಿಶ್ ಶೆಟ್ಟರ್ ಅವರ ಮೂಲಕ ಕಾಂಗ್ರೆಸ್ ಚಿಕ್ಕನಗೌಡರಿಗೆ ಗಾಳ ಹಾಕಿದೆ.

Previous articleಕಾಂಗ್ರೆಸ್ ಸರ್ಕಾರ ರಚಿಸುವುದು ನಿಶ್ಚಿತ
Next articleಅಮೆರಿಕನ್ನರನ್ನು ಸೆಳೆದ ಕರುನಾಡಿನ ಯಕ್ಷಗಾನ