ಪಂಚಮಸಾಲಿ ಮೀಸಲಾತಿ ಕುರಿತು ಮಂಗಳವಾರ ಸಿಎಂ ಜೊತೆ ಚರ್ಚೆ

0
13

ನಿಪ್ಪಾಣಿ: ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ನಿಪ್ಪಾಣಿಯಲ್ಲಿ ಭಾನುವಾರ 2 ಎ ಮೀಸಲಾತಿ ಸಂಬಂಧ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಂಚಮಸಾಲಿ ಮೀಸಲಾತಿ ಸಂಬಂಧ ಮೊದಲ ಹೋರಾಟದಿಂದ ಈಗ 6ನೇ ಹಂತದ ಹೋರಾಟದವರೆಗೂ ನಾನು ಪಾಲ್ಗೊಂಡಿದ್ದೇನೆ. ಹಾಗಾಗಿ ಈ ವಿಷಯದ ಕುರಿತು ನನಗೆ ಸಂಪೂರ್ಣಅರಿವಿದೆ. ನಮ್ಮ ಸಮಾಜಕ್ಕೆ ಮೀಸಲಾತಿ ಏಕೆ ಅಗತ್ಯ ಎನ್ನುವ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಗೆ ಮಾಡಿಕೊಡುತ್ತೇನೆ ಎಂದು ಅರು ಭರವಸೆ ನೀಡಿದರು.
ಸ್ವಾಮಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಚನ್ನಮ್ಮ ಎಂದು ಕರೆಯುತ್ತಾರೆ. ಆದರೆ ನಾನು ಚನ್ನಮ್ಮನ ಪಾದದ ಧೂಳಿಗೂ ಸಮನಲ್ಲ. ಆದರೆ ಚನ್ನಮ್ಮನ ಸಮಾಜದಲ್ಲಿ ಜನಿಸಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದೂ ಹೆಬ್ಬಾಳಕರ್ ಹೇಳಿದರು.

Previous articleಶ್ರೀರಂಗಪಟ್ಟಣದಲ್ಲಿ ಮುಂದುವರೆದ ಪ್ರತಿಭಟನೆ : ವಿವಿಧ ಪ್ರಗತಿ ಪರ ಸಂಘಟನೆಗಳಿಂದ ಬೈಕ್ ಜಾಥಾ – ಕೈ ಶಾಸಕ‌ ಸಾಥ್
Next articleಪ್ರಕಾಶ ರೈ ಕಾರ್ಯಕ್ರಮಕ್ಕೆ ವಿರೋಧ: ಕಪ್ಪು ಪಟ್ಟಿ ಹಿಡಿದವರ ಬಂಧನ