ನ್ಯಾಯಾಲಯದ ಆದೇಶದ ಬಳಿಕವೇ ಮರು ಪರೀಕ್ಷೆ

0
25
exam

ಹುಬ್ಬಳ್ಳಿ: ನ್ಯಾಯಾಲಯದ ಆದೇಶದ ಬಳಕವೇ ಪಿಎಸ್‌ಐ ಮರು ಪರೀಕ್ಷೆ ಮಾಡಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಮರು ಪರೀಕ್ಷೆ ನಡೆಸಲು ಈಗಾಗಲೇ ಆದೇಶಿಸಿದ್ದೇವೆ. ಕೆಲ ವ್ಯಕ್ತಿಗಳು ನ್ಯಾಯಾಲಯ ಮೋರೆ ಹೋಗಿದ್ದರಿಂದ ಆದೇಶ ಬರುವವರೆಗೂ ಪರೀಕ್ಷೆ ನಡೆಸಲು ಆಗುವುದಿಲ್ಲ. ಮರು ಪರೀಕ್ಷೆಯಾಗುವ ಬಗ್ಗೆ ನನಗೆ ಭರವಸೆ ಇದೆ. ಎಂದು ತೀರ್ಮಾಣ ಬರುತ್ತದೆಯೋ ಅಂದು ಪರೀಕ್ಷೆ ಬರೆಸಲು ಬದ್ಧರಿದ್ದೇವೆ ಎಂದರು.
ಪೊಲೀಸ್ ಇಲಾಖೆಯ ಯಾವುದೇ ಪರೀಕ್ಷೆಗಳಿರಲಿ ಅದರಲ್ಲಿ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನದ ಹಿಂದೆಯೂ ಒಬ್ಬ ವ್ಯಕ್ತಿ ಕೂತಿರುತ್ತಾನೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಆ ವ್ಯಕ್ತಿ ರಾಜಿಯಾಗಿಬಿಟ್ಟರೆ, ಎಷ್ಟೇ ತಂತ್ರಜ್ಞಾನ ಬಳಸಿದರೂ ಅದು ವಿಫಲ ವಾಗುತ್ತದೆ. ಯಾರು ಯಾರು ರಾಜಿಯಾಗಿದ್ದಾರೆ ಅವರೆಲ್ಲ ಜೈಲಿನಲ್ಲಿದ್ದಾರೆ. ಮೇಲಾಧಿಕಾರಿಗಳು ಸೇರಿದಂತೆ ಎಲ್ಲರೂ ಇಂದು ಜೈಲಿನಲ್ಲಿದ್ದಾರೆ. ಯಾರು ತಫ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ.
ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶೇ.೫ ರಷ್ಟು ಸಾಧನೆ ಇದೆ. ಇದು ಗಡಿ ಮೀರಿದ ಪ್ರಕರಣಗಳು. ಅಮೇರಿಕಾ, ಆಪ್ರಿಕಾದಲ್ಲಿ ಕುಳಿತುಕಿಂಡು ಸೈಬರ್ ಕ್ರೈಂ ಮಾಡಬಹುದು. ಪ್ರಕರಣ ಬೇದಿಸಿದಾಗ ರಿಕವರಿಯಾದ ಮೊತ್ತಕ್ಕೂ ನಾವು ಸ್ಥಳಕ್ಕೆ ಹೋಗಿ ಬೇಧಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮುಖ ರಹಿತ ಕ್ರೈಂ ಇರುವುದರಿಂದ ನಮಗೆ ಕಂಪ್ಯೂಟರ್ ಮಾತ್ರ ದೊರೆಯುತ್ತದೆ. ಹೀಗಾಗಿ ಈ ವಿಚಾರದಲ್ಲಿ ಜಾಗೃತಿ ಅಗತ್ಯ. ಇದು ರಾಜ್ಯದ ಸಮಸ್ಯೆಯಲ್ಲ ಇಡೀ ದೇಶದ ಸಮಸ್ಯೆ. ಸೈಬರ್ ಕ್ರೈಂನಲ್ಲಿ ಗೋಲ್ಡನ್ ಅವರ್ ಎಂದರೆ 1930 ಇದಕ್ಕೆ ಕರೆ ಮಾಡಿದರೆ ಪ್ರಕರಣ ನಡೆದ ಒಂದು ಗಂಟೆ ಒಳಗೆ ಬ್ಯಾಂಕ್ ಖಾತೆ ಬಂದ್ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಹಂತ ಹಂತವಾಗಿ ಪೊಲೀಸ್ ಠಾಣೆಗಳನ್ನು ತೆರೆಯಲಾಗುವುದು. ಚುನಾವಣೆ ನಿರ್ವಹಣೆ, ಬಂದೂಬಸ್ತ್ ಬಗ್ಗೆ ಸಭೆ ನಡೆಸಿ ಕಾರ್ಯ ಪ್ರವೃತ್ತರಾಗುತ್ತೇವೆ ಎಂದರು.

Previous articleಎರಡನೇ ಪಟ್ಟಿ ಬಿಡುಗಡೆ ಎಫೆಕ್ಟ್: ಬೆಳಗಾವಿ ಕಾಂಗ್ರೆಸ್‌ನಲ್ಲಿ ಬಂಡಾಯದ ಹೊಗೆ
Next articleಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ: ಬೈಕ್​ಗಳು ಭಸ್ಮ