ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅಧಿಕಾರ ಸ್ವೀಕಾರ

0
12

ಹುಬ್ಬಳ್ಳಿ : ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಕೆ.ಎಸ್. ಜೈನ್ ಅವರು ಅಧಿಕಾರ ವಹಿಸಿಕೊಂಡರು.

ಕೆ.ಎಸ್. ಜೈನ್ ಅವರು ರೂರ್ಕಿ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು 1987 ರಲ್ಲಿ ಪಡೆದಿದ್ದಾರೆ.

ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ, ಕೆ.ಎಸ್.ಜೈನ್ ಅವರು ದಕ್ಷಿಣ ಮಧ್ಯ ರೈಲ್ವೆಯಲ್ಲಿ ಪ್ರಧಾನ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಸ್ಥಾನವನ್ನು ಹೊಂದಿದ್ದರು.
ಅವರ ವೃತ್ತಿಜೀವನದುದ್ದಕ್ಕೂ ನಿರಂತರವಾಗಿ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ.

ಕೆ.ಎಸ್. ಜೈನ್ ಅವರ ಹೊಸ ವೃತ್ತಿ ಜೀವನಕ್ಕಾಗಿ ನಾವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ, ನೈಋತ್ಯ ರೈಲ್ವೆಯ ಬೆಳವಣಿಗೆ ಮತ್ತು ದಕ್ಷತೆಗೆ ಅವರ ನಿರಂತರ ಕೊಡುಗೆಗಳನ್ನು ನೋಡಲಿದ್ದೇವೆ” ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ತಿಳಿಸಿದ್ದಾರೆ

Previous articleಐಪಿಎಸ್ ಅಧಿಕಾರಿಗೆ ವಿಚಾರಣೆಗಾಗಿ ಬುಲಾವ್
Next articleಉದ್ಯೋಗ ಮೇಳಕ್ಕೆ ತೆರಳುವವರಿಗೆ ಫೆ. 25, 26ರಂದು ವಿಶೇಷ ಬಸ್ ವ್ಯವಸ್ಥೆ