ನೇಹಾ ನಿವಾಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

0
21

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ನಿರಂಜನ ಹಿರೇಮಠ್ ಅವರ ಮಗಳ ಹತ್ಯೆಯ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ಅವರ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಮಗಳನ್ನು ಕಳೆದುಕೊಂಡು, ನೋವಿನಲ್ಲಿರುವ ತಂದೆ-ತಾಯಿಗೆ ಭಗವಂತ ನೋವು ಸಹಿಸುವ ಶಕ್ತಿ‌ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಮಯದಲ್ಲಿ ಹುಬ್ಬಳ್ಳಿ ಪೋಲಿಸ್ ಆಯುಕ್ತರಾದ ರೇಣುಕಾ ಶಶಿಕುಮಾರ್, ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ್, ಮಹಾನಗರ ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ, ಮೋಹನ್ ಲಿಂಬಿಕಾಯಿ, ಬಂಗಾರೇಶ್ ಹಿರೇಮಠ್, ರಾಜಶೇಖರ್ ಮೆಣಸಿನಕಾಯಿ ಹಾಗೂ ಅನೇಕರು ಇದ್ದರು.

Previous articleನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ: ದೂರು ದಾಖಲು
Next articleಮೀನುಗಾರಿಕಾ ಬೋಟ್ ಮುಳುಗಡೆ: ನಾಲ್ವರು ಮೀನುಗಾರರ ರಕ್ಷಣೆ!