ನೂತನ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ : ಯುವಕನ ಕೊಲೆ

0
13

ಚಿಕ್ಕಮಗಳೂರು: ಶಾಸಕರ ಅಭಿನಂದನಾ ಸಮಾರಂಭದಲ್ಲೇ ಚಾಕುವಿನಿಂದ ಇರಿದು ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ತರೀಕೆರೆಯಲ್ಲಿ ಕಳೆದ ರಾತ್ರಿ ನಡೆದಿದೆ.
ಮೃತಪಟ್ಟ ಯುವಕನ್ನು ವರುಣ್(28) ಎಂದು ಗುರುತಿಸಲಾಗಿದ್ದು,
ನೂತನ ಶಾಸಕ ಶ್ರೀನಿವಾಸ್ ಅಭಿನಂದನಾ ಸಮಾರಂಭದಲ್ಲಿ ಈ ಹತ್ಯೆ ಮಾಡಲಾಗಿದೆ. ಗಲಾಟೆ ವೇಳೆಯಲ್ಲಿ ಮಂಜು ಹಾಗೂ ಸಂಜು ಎಂಬುವರಿಗೆ ಗಾಯಗಳಾಗಿವೆ.
ಅಭಿಮಾನಿಗಳು ಶಾಸಕ ಶ್ರೀನಿವಾಸ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಸ್ಥಳಕ್ಕೆ ಎಸ್.ಪಿ. ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleವಾಲಿಬಾಲ್ ಕ್ರೀಡಾಪಟುಗಳಿಗೆ ನೆರವಾದ ಸಂತೋಷ್ ಲಾಡ್
Next articleಕಾರು-ಲಾರಿ ಮಧ್ಯೆ ಭೀಕರ ಅಪಘಾತ: ನಾಲ್ವರ ಸಾವು