ನಿಗೂಢ ಕಾಯಿಲೆಗೆ ನೂರಾರು ಕುರಿ ಸಾವು

0
34

ಗದಗ: ನಿಂತಲ್ಲಿಯೇ ನೂರಾರು ಕುರಿಗಳ ಹಿಂಡು ವಿಲವಿಲನೆ ಒದ್ದಾಡಿ ಪ್ರಾಣ ತ್ಯಜಸುತ್ತಿರುವ ಘಟನೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
ಈ ಕುರಿಗಳಿಗೆ ಮಾರಕ ಅಂಥ್ರ್ಯಾಕ್ಸ್ ರೋಗ ತಗಲಿದೆಯೆಂದು ಪಶು ಇಲಾಖೆಯ ಮೂಲಗಳು ತಿಳಿಸಿವೆ. ಸಾವನ್ನಪ್ಪಿದ ಕುರಿಗಳ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರವೇ ನಿರ್ದಿಷ್ಟ ಕಾರಣ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ನಿಗೂಢ ಕಾಯಿಲೆಗೆ ಹಿಂಡು ಹಿಂಡು ಕುರಿಗಳು ಸಾವನ್ನಪ್ಪುತ್ತಿವೆ. ಅರ್ಧ ಗಂಟೆಯಲ್ಲಿ ೨೦ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆರಳ್ಳಿ ತಾಂಡಾದಲ್ಲಿ ನಡೆದಿದೆ. ೬೦ ಕುರಿಗಳಿರುವ ಹಿಂಡಿನಲ್ಲಿ ನೋಡು ನೋಡುತ್ತಿದ್ದಂತೆ ೨೦ ಕುರಿಗಳು ಸಾವನ್ನಪ್ಪಿವೆ. ಪೋಮಪ್ಪ ಲಮಾಣಿ ಎಂಬುವರಿಗೆ ಸೇರಿದ ಕುರಿಗಳ ಸರಣಿ ಸಾವಾಗಿವೆ. ಕುರಿಗಳ ಸಾವು ಕಣ್ಣಾರೆ ಕಂಡು ಕುರಿಗಾಹಿಗಳು ದಂಗಾಗಿದ್ದಾರೆ.
ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಅಂಥ್ರ್ಯಾಕ್ಸ್ ಸೋಂಕು ಶಂಕೆ ವ್ಯಕ್ತಪಡಿಸಿದ್ದಾರೆ. (ದೊಡ್ಡ ರೋಗ) ಕುರಿಗಳ ಮೂಗಲ್ಲಿ ರಕ್ತ ಸ್ರಾವವಾಗಿ ಸಾಯುತ್ತಿವೆಯೆಂದು ವೈದ್ಯರು ಹೇಳಿದ್ದಾರೆ. ಕುರಿಗಳ ಮಾದರಿ ತಪಾಸಣೆಗೆ ಲ್ಯಾಬ್‌ಗೆ ಕಳಿಸಲಾಗಿದೆ. ವರದಿ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಶು ವೈದ್ಯರು ತಿಳಿಸಿದ್ದಾರೆ.

Previous articleನದಿಯಲ್ಲಿ ನಾಪತ್ತೆಯಾದ ಮೂವರಲ್ಲಿ ಇಬ್ಬರ ಶವ ಪತ್ತೆ
Next articleಸರಕಾರದ ವಿರುದ್ಧ ಶೀಘ್ರವೇ ಹೋರಾಟ: ಗುಣಧರನಂದಿ ಸ್ವಾಮೀಜಿ ಎಚ್ಚರಿಕೆ