ಬೆಂಗಳೂರು: ನಾವೆಲ್ಲ ಸೇರಿ ಬ್ರ್ಯಾಂಡ್ ಕರ್ನಾಟಕ ಕಟ್ಟೋಣ! ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಎಂದಿದ್ದಾರೆ. “ಉತ್ತರ ಕರ್ನಾಟಕ” ಎಂಬ ಟ್ವೀಟ್‌ರ ಅಕೌಂಟ್ ಮುಖಾಂತರ ಸಚಿವ ಎಂ ಬಿ ಪಾಟೀಲ್‌ರಿಗೆ “ಬಂಡವಾಳವನ್ನು ಹುಬ್ಬಳ್ಳಿ-ಧಾರವಾಡಕ್ಕೆ ತನ್ನಿ.” ಎಂಬ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೂಡಿಕೆ ಮತ್ತು ಕೈಗಾರಿಕೆಗಳು ಬೆಂಗಳೂರಿಗೆ ಮಾತ್ರ ಕೇಂದ್ರೀಕೃತವಾಗಬಾರದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ, ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಲು ಸಂಘಟಿತ ಯೋಜನೆ ರೂಪಿಸುತ್ತಿದ್ದೇನೆ. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್, ಮಂಗಳೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಅಗತ್ಯವಿದೆ. ನಾವೆಲ್ಲ ಸೇರಿ ಬ್ರ್ಯಾಂಡ್ ಕರ್ನಾಟಕ ಕಟ್ಟೋಣ! ಎಂದಿದ್ದಾರೆ.