ನಾವೀಗ ಟ್ರೈಲರ್ ಮಾತ್ರ ತೋರಿಸಿದ್ದೇವೆ ಕಾಂಗ್ರೆಸ್‌ಗೆ ಭರತ್ ಶೆಟ್ಟಿ ಖಡಕ್ ಎಚ್ಚರಿಕೆ

0
69

ಪುತ್ತೂರು: ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಮಾತನಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ನಡೆಸಿದ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಯಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಶಾಸಕರಾದ ಭರತ್ ಶೆಟ್ಟಿಯವರು ಮಾತನಾಡಿ, ನಾವೀಗ ಟ್ರೈಲರ್ ಮಾತ್ರ ತೋರಿಸಿದ್ದೇವೆ ಇನ್ಮುಂದೆ ನಡೆಯಲಿದೆ ದೊಡ್ಡ ಮಟ್ಟದ ಪ್ರತಿಭಟನೆ ಎಂಬ ಎಚ್ಚರಿಕೆ ನೀಡಿದರು.
ಆನೆ ನಡೆದದ್ದೇ ದಾರಿ ಎಂಬಂತೆ ಉದ್ಧಟತನ ತೋರಿಸುವ ಕಾಂಗ್ರೆಸ್ ಸರಕಾರ ರಾಜ್ಯದ ಪೊಲೀಸ್ ಇಲಾಖೆಯನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಮಾತನಾಡುವ ಕಾಂಗ್ರೆಸ್ ನಾಯಕರ ವಿರುದ್ಧ ಸುಮ್ಮನಿರುವ ಪೊಲೀಸರು ಅದನ್ನು ಪ್ರತಿಭಟಿಸುವ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಸಂಘರ್ಷದಿಂದ ಹುಟ್ಟಿದ ಪಕ್ಷಕ್ಕೆ ಸಂಘರ್ಷದ ಹಾದಿ ತೋರಿಸುವ ಕಾಂಗ್ರೆಸ್‌ನ ಬಂಡ ಸಾಹಸ ಹಾಸ್ಯಾಸ್ಪದ ಎಂದರು. ಐವನ್ ಡಿಸೋಜರ ಬಾಂಗ್ಲಾ ಮಾದರಿ ಹಿಂದೂಗಳ ವಿರುದ್ಧ ಹಿಂಸಾತ್ಮಕ ಹೋರಾಟ ಹೇಳಿಕೆ ದೇಶ ದ್ರೋಹವಾಗಿದ್ದು ಕೇಸು ದಾಖಲಿಸಬೇಕು. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವವರೆಗೆ ಬಿಜೆಪಿ ನಿರಂತರವಾಗಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಗುಡುಗಿದ್ದಾರೆ.

Previous articleದೇಶದ್ರೋಹಿ ಹೇಳಿಕೆ ಖಂಡಿಸಿ ಪ್ರತಿಭಟನೆ
Next articleಎನ್‌ಐಎ ಅಧಿಕಾರಿಗಳಿಂದ ಮೂವರು ವಶಕ್ಕೆ