ನಾಪತ್ತೆಯಾಗಿದ್ದ ಉದ್ಯಮಿ ರಾಜು ಪವಾರ್‌ ಶವವಾಗಿ ಪತ್ತೆ

0
24

ಬೆಳಗಾವಿ: ಶುಕ್ರವಾರ ರಾತ್ರಿ ನಾಪತ್ತೆಯಾಗಿದ್ದ ಉದ್ಯಮಿ ರಾಜು ಜವಾರ್​ (53) ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಗೋಕಾಕ ತಾಲೂಕಿನ ಬ್ಯಾಳಿಕಾಟಾ ಸಮೀಪದ ಖಾಸಗಿ ಆಸ್ಪತ್ರೆಯ ಬಳಿ ವಾಹನ ನಿಲ್ಲಿಸಿ ರಾಜು ಜವಾರ್​ ಕಾಣೆಯಾಗಿದ್ದರು. ಅವರ ಮೊಬೈಲ್​ ಫೋನ್​ ಕೂಡ ಸ್ವಿಚ್​ ಆಫ್​ ಆಗಿತ್ತು. ಕುಟುಂಬಸ್ಥರು ಗೋಕಾಕ ‌ಶಹರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ ಅವರ ಶವ ತಾಲೂಕಿನ ಕೊಳವೆ ಕಾಲುವೆಯಲ್ಲಿ ದೊರೆತಿದೆ. ಉದ್ಯಮಿಯನ್ನು ಅಪಹರಿಸಿ ಕೊಲೆಗೈದು ಕಾಲುವೆಯಲ್ಲಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಗೋಕಾಕ ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ.

Previous articleಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆಗೈದ ತಂದೆ
Next articleನೀರಿನಲ್ಲಿ ಮುಳುಗಿ ಇಬ್ಬರು ಸಾವು