ನಾಡೋಜ ಬೆಳಗಲ್ಲು ವೀರಣ್ಣ ನಿಧನ

0
9

ಬಳ್ಳಾರಿ: ಕಾರ್- ಲಾರಿ ನಡುವೆ ಸಂಭವಿಸಿದ ಡಿಕ್ಕಿಯಿಂದ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಅಂತಾರಾಷ್ಟ್ರೀಯ ತೊಗಲು ಬೊಂಬೆ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನರಾಗಿದ್ದಾರೆ.
91 ವರ್ಷದ ವೀರಣ್ಣ ಅವರು ಗಾಂಧೀಜಿ ಕುರಿತ ರೂಪಕವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಖ್ಯಾತಿ ವೀರಣ್ಣ ಅವರಿಗೆ ಸಲ್ಲುತ್ತದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಹಿರೇಹಳ್ಳಿ ಬಳಿ ಕಾರು ಪಲ್ಟಿ ಆಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೀರಣ್ಣ ಅವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.
ಕಾರ್ ನಲ್ಲಿದ್ದ ಪುತ್ರ ಹನುಮಂತಪ್ಪಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಸಂಭವಿಸಿದೆ.

Previous articleಮಹಾನಗರ ಪಾಲಿಕೆ ಹಳೆ ಕಟ್ಟಡಕ್ಕೆ ಬೆಂಕಿ
Next articleಬೆಳಗಾವಿ: ಕಾಮಗಾರಿ ಟೆಂಡರಗಾಗಿ ಕಮಿಷನ್ ದರ ಫಿಕ್ಸ್ ಮಾಡಿದ ಶಾಸಕರ ಆಪ್ತ : ಗುತ್ತಿಗೆದಾರರಿಂದ ಕಮೀಷನ್ ಹಣ ಪಡೆದ ವಿಡಿಯೋ ವೈರಲ್ : ಲಕ್ಷ ಲಕ್ಷ ದುಡ್ಡು ಪಡೆದಿರುವದು ದೃಶ್ಯಾವಳಿಯಲ್ಲಿ ಪತ್ತೆ