ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಟಿಕೆಟ್ ಬೆಲೆ ಏರಿಕೆ

0
24

ನಾಳೆಯಿಂದಲೇ ಹೊಸ ದರ ಜಾರಿ

ಬೆಂಗಳೂರು: ನಾಳೆಯೊಂದಲೇ ನಮ್ಮ ಮೆಟ್ರೋದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ.

  1. ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ, ಕೇಂದ್ರ ಸರ್ಕಾರ ಆದೇಶ ಪತ್ರ ಸಂಖ್ಯೆ 26/01/2021-EO (SM-II) ದಿನಾಂಕ 07.09.2024 ರಂದು ಹೈಕೋರ್ಟ್‌ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಯಿತು.
  2. ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ದಿನಾಂಕ 16.12.2024 ರಂದು ಸಲ್ಲಿಸಿತು. ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಸೆಕ್ಷನ್ 37ರ ಕಾಯಿದೆಯ ಪ್ರಕಾರ ದರ ಪರಿಷ್ಕರಣೆ ಸಮಿತಿಯು ಮಾಡಿದ ಶಿಫಾರಸುಗಳು ಮೆಟ್ರೋ ರೈಲ್ವೇ ಆಡಳಿತದ ಮೇಲೆ ಬದ್ಧವಾಗಿರುತ್ತದೆ. ಅದರಂತೆ, ಬಿ.ಎಂ.ಆರ್.ಸಿ.ಎಲ್ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ, ಕೆಳಗೆ ನೀಡಿರುವ (ಪ್ಯಾರಾ 3) ಪರಿಷ್ಕೃತ ದರ ದಿನಾಂಕ 09.02.2025 ರಿಂದ ಜಾರಿಗೆ ಬರಲಿದೆ.
  3. ಕೈಗೆಟುಕುವಿಕೆ ಮತ್ತು ಆರ್ಥಿಕ ಸುಸ್ಥಿರತೆಯ ನಡುವಿನ ಸಮತೋಲನದ ನಂತರ ಪರಿಷ್ಕರಿಸಿದ ದರಗಳನ್ನು ನೀಡಲಾಗಿದೆ ಎಂದು ತಿಳಿಸಿದೆ.
  1. ಸಮಿತಿಯ ಇತರ ಶಿಫಾರಸುಗಳು : ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ ಶೇ 5 ರಿಯಾಯಿತಿಯನ್ನು ಮುಂದುವರಿಸಿದೆ.
    ಆಫ್-ಪೀಕ್ ಸಮಯದಲ್ಲಿ ಪಯಾಣಕ್ಕಾಗಿ ಮೆಟ್ರೋ ವ್ಯವಸ್ಥೆಗೆ ಪ್ರವೇಶಿಸುವ ಸಮಯವನ್ನು ಆಧರಿಸಿ, ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ ಶೇ 5 ರಿಯಾಯಿತಿ ಶೇ 5 ಪೀಕ್ ಅವರ್ + ಶೇ 5 ಆಫ್ ಪೀಕ್ ಅವರ್- ಒಟ್ಟು ಶೇ 10 ರಿಯಾಯಿತಿ) ಆಫ್-ಪೀಕ್ ಸಮಯ: ವಾರದ ದಿನಗಳಲ್ಲಿ, ಬೆಳಗ್ಗೆ ಕಾರ್ಯಾಚರಣೆ ಆರಂಭದಿಂದ 8 ಗಂಟೆಯವರೆಗೆ, ಮಧ್ಯಾನ 12 ಗಂಟೆಯಿಂದ 4 ಗಂಟೆಯವರೆಗೆ ಮತ್ತು ರಾತ್ರಿ 9 ಗಂಟೆಯಿಂದ ಕಾರ್ಯಾಚರಣೆ ಮುಕ್ತಾಯದವರಗೆ. ಎಲ್ಲಾ ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ (ಜನವರಿ 26, ಆಗಸ್ಟ್ 15, ಅಕ್ಟೋಬರ್ 02) ದಿನವಿಡೀ ಏಕರೂಪವಾಗಿ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ 10% ರಿಯಾಯಿತಿ. ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ ಮೊತ್ತ ರೂ 90 ಹೊಂದಿರಬೇಕು.• ಪರಿಷ್ಕೃತ ಪವಾಸಿ ಕಾರ್ಡ್ (ದಿನದ ಪಾಸ್‌ಗಳು) ಮತ್ತು ಗ್ರೂಪ್ ಟಿಕೆಟ್ ದರಗಳನ್ನು ನೀಡಿದ್ದಾರೆ.
Previous articleನಟ ಶಿವರಾಜ ಕುಮಾರ್‌ ಆರೋಗ್ಯ ವಿಚಾರಿಸಿದ ಡಿ. ಕೆ. ಶಿವಕುಮಾರ್‌
Next articleಫ್ಯಾನ್ ದುರಸ್ತಿ ಮಾಡುತ್ತಿದ್ದಾಗ ಕರೆಂಟ್ ಪ್ರವಹಿಸಿ ಸಾವು