ಡಿಸೆಂಬರ್​ 6ರ ಬಳಿಕ ನನ್ನ ಮನಸ್ಸಿ‌ನ ಭಾವನೆ ಹೇಳುವೆ

0
13

ಮೈಸೂರು: ಡಿಸೆಂಬರ್ 6ರ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆಗೆ ನನ್ನ ಸಮ್ಮತಿ ಇದೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. ಡಿಸೆಂಬರ್ 6ರ ಬಳಿಕ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಯಾವ ರೀತಿ ನನಗೆ ಹೊಡೆತ ಆಗಿದೆ ಎಂಬುದನ್ನು ವಿವರಿಸುತ್ತೇನೆ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿ ಅಲ್ಲ, ಒಳ ಒಪ್ಪಂದಕ್ಕೆ ಸಿಮೀತವಲ್ಲ. ನನ್ನನ್ನು ಯಾರು ಸಂಪರ್ಕಿಸಿಲ್ಲ, ನಾನೂ ಯಾರನ್ನು ಸಂಪರ್ಕಿಸಿಲ್ಲ. ಡಿಸೆಂಬರ್​ 6ರ ಬಳಿಕ ನನ್ನ ಮನಸ್ಸಿ‌ನ ಭಾವನೆ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

Previous articleಮಾಧುರಿಗೆ ಜೀವಮಾನ ಸಾಧನೆ ಗರಿ
Next articleಜಾತಿ ಜನಗಣತಿ ಬೇಡ ಎನ್ನುವವರಿಗೂ ಅದರಲ್ಲೇನಿದೆ ಎಂದು ತಿಳಿದಿಲ್ಲ