ಬಳ್ಳಾರಿ: ನಾನು ಏನು ಮಾಡಿದರೂ ತಪ್ಪೇ, ಬಳ್ಳಾರಿ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನೂ ನನಗೆ ನೀಡುತ್ತಿಲ್ಲ. ನನ್ನನ್ನೂ ಬೆಳಗಾವಿ ಜೈಲಿಗೆ ಹಾಕಿಬಿಡಿ ಎಂದು ದರ್ಶನ್ ಜೈಲಾಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದಾರೆ.
ಗುರುವಾರ ಬಳ್ಳಾರಿ ಜೈಲಿಗೆ ವಕೀಲರು ದರ್ಶನ್ ಭೇಟಿ ವೇಳೆ ಮಾಧ್ಯಮದವರತ್ತ ಕೈ ಬೆರಳು ತೋರಿ ಅಸಭ್ಯ ವರ್ತನೆ ಪ್ರದರ್ಶನ ಮಾಡಿದ್ದರು. ಹೀಗೆ ಯಾಕೆ ಮಾಡಿದಿರಿ ಎಂದು ಜೈಲಾಧಿಕಾರಿಗಳು ಕೇಳಿದ ಪ್ರಶ್ನೆಗೆ ದರ್ಶನ್ ಹೀಗೆ ಹೇಳಿದ್ದಾರೆ. ಟಿವಿ ಕೊಡುತ್ತಿಲ್ಲ. ದಿಂಬು ಇಲ್ಲ, ಬೆಡ್‌ಶೀಟ್ ಇಲ್ಲ ಹೀಗೆ ಆದರೆ ಹೇಗೆ? ಅದರಲ್ಲೂ ನಾನು ಕುಂತರೂ, ನಿಂತರೂ ತಪ್ಪು. ಮಾಧ್ಯಮದವರನ್ನು ಗೇಟಿನವರೆಗೂ ಯಾಕೆ ಬಿಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ವಿಚಾರಣೆ ಮುಂದಕ್ಕೆ: ದರ್ಶನ್ ನ್ಯಾಯಾಂಗ ಬಂಧನ ಅವಧಿಯ ಅರ್ಜಿಯ ವಿಚಾರಣೆ ಅವರು ಬಂಧಿಯಾಗಿರುವ ಹೈ ಸೆಕ್ಯೂರಿಟಿ ಸೆಲ್‌ನಿಂದಲೇ ನಡೆಯಿತು. ಅರ್ಜಿ ವಿಚಾರಣೆ ಪುನಃ ಸೆ. ೧೮ಕ್ಕೆ ಮುಂದೂಡಲಾಯಿತು.