ನನ್ನ ಮಗ ರೌಡಿ ಅಲ್ಲ… ಅವನ ಸಾವಿಗೆ ನ್ಯಾಯ ಸಿಗಬೇಕು

ಮಂಗಳೂರು(ಕುಪ್ಪೆಪದವು): ಗೃಹಸಚಿವ ಡಾ. ಜಿ. ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪದೇ ಪದೇ ನನ್ನ ಮಗ ರೌಡಿ ರೌಡಿ ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಮಗ ಹಿಂದೂ ಕಾರ್ಯಕರ್ತ ಹಿಂದೂ ಸಮಾಜದ ಸೇವೆಯಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದ ನನ್ನ ಮಗನ ಸಾವು ವ್ಯರ್ಥವಾಗಲು ಬಿಡಬಾರದು. ಅವನ ರಕ್ತಕ್ಕೆ, ಸಾವಿಗೆ ನ್ಯಾಯ ಸಿಗಬೇಕು. ರಾಜ್ಯದ ಸರಕಾರ ಪಿಎಫ್‌ಐ ಹೇಳಿದಂತೆ ಚಾರ್ಜ್‌ಶೀಟ್ ತಯಾರಿಸುವ ಸಾಧ್ಯತೆ ಇದೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಎಂ. ಶೆಟ್ಟಿ ಆಗ್ರಹಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹಮ್ಮಿಕೊಂಡಿದ್ದ ‘ಬಜಪೆ ಚಲೋ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಮಗ ರೌಡಿಯಲ್ಲ ನನ್ನ ಮಗ ಭಜರಂಗದಳದ ಕಾರ್ಯಕರ್ತ. ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನನ್ನ ಮಗನ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಲು ಈ ಸರಕಾರ ಅವಕಾಶ ನೀಡುವುದಿಲ್ಲ. ತನಿಖೆಯನ್ನು ಎನ್‌ಐಎಗೆ ವಹಿಸಬೇಕು. ಐವತ್ತಕ್ಕೂ ಹೆಚ್ಚು ಜನರು ಸುತ್ತುವರಿದು ನನ್ನ ಮಗನಿಗೆ ಚಿತ್ರ ಹಿಂಸೆ ಕೊಟ್ಟು ಕೊಂದು ಹಾಕಿದ್ದಾರೆ.