ನದಿಗೆ ಹಾರಿ ತಾಯಿ ಮಗಳು ಸಾವು..!

0
16

ವಾಡಿ: ಶಹಾಬಾದ ಪಟ್ಟಣ ಹತ್ತಿರವಿರುವ ಕಾಗಿಣ ನದಿಯ ಮೇಲ್ಸೇತುವೆಯಿಂದ ಹಾರಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಅಫ್ಜಲ್ ಪುರ ತಾಲೂಕಿನ ನೀಲೂರು ಗ್ರಾಮದ ನಿವಾಸಿ ಕಲ್ಬುರ್ಗಿ ವುಮೆನ್ಸ್ ಪಾಲ್ ಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ವರ್ಷಾ ತಂದೆ ಶಿವಶರಣಪ್ಪ ಪಾಟೀಲ್ ಹಾಗೂ ತಾಯಿ ಸುಮಲತಾ ಗಂಡ ಶಿವಶರಣಪ್ಪ ಪಾಟೀಲ್ (41), ಮೃತ ದುರ್ದೈವಿಯಾಗಿದ್ದಾರೆ.

ತಾಯಿ ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ನಿಖರ ಮಾಹಿತಿ ತಿಳಿದು ಬಂದಿಲ್ಲ. ಕಲಬುರ್ಗಿಯಿಂದ ಬೈಕ್ ಮೇಲೆ ಬಂದಿದ್ದ ತಾಯಿ ಮಗಳು, ಶಹಾಬಾದ ಕಾಗಿಣ ಮೇಲ್ಸೇತುವೆ ಮೇಲೆ ಬೈಕ್ ನಿಲ್ಲಿಸಿ ನದಿಗೆ ಜಿಗಿದಿದ್ದಾರೆ ಎನ್ನಲಾಗುತ್ತಿದೆ.

ಮೃತ ಶವಗಳ ಶೋಧಕಾರ್ಯ ನಡೆಸಿದ ರಿಸ್ಕ್ಯೂವ ತಂಡದ ಸಿಬ್ಬಂದಿಗಳು, ಮೃತರ ಶವಗಳು ಹೊರ ತೆಗೆದಿದ್ದಾರೆ. ಪತಿ ಶಿವಶರಣಪ್ಪ ಪಾಟೀಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಶಹಾಬಾದ ಪೊಲೀಸ್ ರು, ಪ್ರಕರಣ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್, ಸಿಪಿಐ ನಟರಾಜ ಲಾಡೆ ಹಾಗೂ ಪಿಎಸ್ಐ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕೋಟಿಗಳ ಲೆಕ್ಕದಲ್ಲಿ ಭರವಸೆ ನೀಡಿ, ಲಕ್ಷಗಳ ಲೆಕ್ಕದಲ್ಲಿ ನೀಡಿದ್ದು ಸಾಧನೆಯೇ…
Next articleರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವಣ್ಣರ ನೂತನ ಭಾವಚಿತ್ರ