ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿ ಸಿದ್ದ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದೆಯನ್ನು ಸೆರೆಹಿಡಿಯುವಲ್ಲಿ ಮುಂಬೈ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಬಾಂಗ್ಲಾ ದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಿಜೋಯ್ ದಾಸ್ ಎನ್ನುವ ಸುಳ್ಳು ಹೆಸರಿನಿಂದ ವಾಸಿಸುತ್ತಿದ್ದ ಈತ ಥಾಣೆಯ ನಿರ್ಜನ ರಸ್ತೆಯ ಪೊದೆ ಯೊಂದರಲ್ಲಿ ಅವಿತುಕೊಂಡಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಶನಿವಾರ ಬಂಧಿಸಲಾಗಿದ್ದ ಶಂಕಿತನನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.