Home Advertisement
Home ತಾಜಾ ಸುದ್ದಿ ಧಾರಾಕಾರ ಮಳೆಗೆ ಭೂಕುಸಿತ

ಧಾರಾಕಾರ ಮಳೆಗೆ ಭೂಕುಸಿತ

0
100

ಬೆಂಗಳೂರು: ರಾತ್ರಿ ಸುರಿದ ಧಾರಾಕಾರ ಮಳೆಗೆ ಭೂಕುಸಿತವಾದ ಘಟನೆ ನಡೆದಿದೆ.
ವಿ.ಸಿ.ನಾಲಾ ಸುರಂಗದ ಪಕ್ಕದಲ್ಲೇ ಭೂ ಕುಸಿತವಾಗಿದ್ದು, ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭೂ ಕುಸಿತದಿಂದ ಫ್ಲೋರ್ ಮಿಲ್ ಗೋಡೆಯೂ ಕುಸಿತವಾಗಿದೆ, ರಾತ್ರಿ ಫ್ಲೋರ್ ಮಿಲ್‌ನಲ್ಲಿ ಯಾರೂ ಇಲ್ಲದಿರುವದರಿಂದ ಅನಾಹುತ ತಪ್ಪಿದಂತಾಗಿದೆ. ಸುರಂಗದಿಂದ ಕೇವಲ 20 ಮೀಟರ್ ದೂರದಲ್ಲೇ ಭೂಕುಸಿತ. ಸುರಂಗ ನಿರ್ಮಾಣ ವೇಳೆ ಮಣ್ಣು ಹಾಗೂ ಸಾಮಗ್ರಿ ಸಾಗಿಸಲು ದಾರಿ ಮಾಡಿಕೊಂಡಿದ್ದ ಜಾಗದಲ್ಲಿ ಭೂ ಕುಸಿತವಾಗಿದೆ, ಸುರಂಗಕ್ಕೆ ಸಂಪರ್ಕ ಕಲ್ಪಿಸಿದ್ದ ಜಾಗವನ್ನು ಸಂಪೂರ್ಣ ಮುಚ್ಟಿರಲಿಲ್ಲ. ಮೇಲುಭಾಗದಲ್ಲಿ ಮಣ್ಣು ಮುಚ್ಚಲಾಗಿತ್ತು. ಅದೇ ಜಾಗದಲ್ಲಿ ರಾಜಣ್ಣ ಎಂಬುವರ ಫ್ಲೋರ್ ಮಿಲ್ ನಿರ್ಮಿಸಿಕೊಂಡಿದ್ರು. ರಾತ್ರಿ ಸುರಿದ ಧಾರಾಕಾರ ಮಳೆಗೆ ಭೂ ಕುಸಿತ. ಏಕಾಏಕಿ ಸುರಂಗ ಕುಸಿದ ಹಿನ್ನೆಲೆ ಮನೆ ಗೋಡೆಯೂ ಕುಸಿತ.

Previous articleಬೇಟೆಗಾರ ಬಲಿ ಗಂಭೀರ ವಿಚಾರ; ಸಂಯಮ ಇರಲಿ
Next articleಗೊತ್ತಿಲ್ಲದಿರುವುದು ಗೊತ್ತಾಗುವುದೇ ಜೀವನ