ಧಾರವಾಡದಲ್ಲಿ ಜೈನ ಸಮುದಾಯದವರ ಮೌನ ಪ್ರತಿಭಟನೆ

0
23

ಧಾರವಾಡ: ಬೆಳಗಾವಿ ಜಿಲ್ಲೆಯ ಆಚಾರ್ಯ ೧೦೮ ಪೂಜ್ಯ ಕಾಮಕುಮಾರ ಮುನಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಧಾರವಾಡದಲ್ಲಿ ಜೈನ ಸಮಾಜದ ವತಿಯಿಂದ ಧಾರವಾಡದಲ್ಲಿ ಮೌನ ಮೆರವಣಿಗೆ ನಡೆಯಿತು.
ಧಾರವಾಡದ ಕಲಾಭವನದಿಂದ ಆರಂಭಗೊಂಡ ಮೌನ ಮೆರವಣಿಗೆಯಲ್ಲಿ ಜೈನ ಸಮಾಜದ ಮುಖಂಡರು ಭಾಗವಹಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದರು. ಭೆಯಲ್ಲಿ ಡಾ. ಅಜಿತ ಪ್ರಸಾದ, ಮುಖಂಡರಾದ ತವನಪ್ಪ, ನಾಗಪ್ಪ ಕುರಕುರಿ, ನಾಗಪ್ಪ ಚಿಣಗಿ, ಪಾರ್ಶ್ವನಾಥ ಶೆಟ್ಟಿ, ಅಶೋಕ ಬಾಗಿ, ಅನುಪಮಾ ರೋಖಡೆ, ಸುಜಾತಾ ಹಡಗಲಿ ಮೊದಲಾದವರು ಪಾಲ್ಗೊಂಡಿದ್ದರು.

Previous articleಜೈನ ಮುನಿಗಳಿಗೆ ಸೂಕ್ತ ಭದ್ರತೆಯ ಭರವಸೆ
Next articleಹಂಪಿಯಲ್ಲಿ ಭಾರತ ನೇತೃತ್ವದ #G20 ಸಭೆ