ಧಾರವಾಡ: “ನನ್ನ ಮಣ್ಣು ನನ್ನ ದೇಶ” ಅಭಿಯಾನಕ್ಕೆ ಚಾಲನೆ 

0
12

ಧಾರವಾಡ: ಧಾರವಾಡದ ಸತ್ತೂರಿನಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೇವಾಪಾಕ್ಷಿಕ ಅಭಿಯಾನದ ಭಾಗವಾಗಿ ನಡೆದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿ ಮಾತನಾಡಿರುವ ಅವರು “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ದೇಶಾದ್ಯಂತ ವಿನೂತನ ಅಭಿಯಾನವನ್ನು ಕೈಗೊಂಡಿದ್ದು, ನನ್ನ ಮಣ್ಣು ನನ್ನ ದೇಶ ಎಂಬ ಪರಿಕಲ್ಪನೆಯಲ್ಲಿ ದೇಶಾದ್ಯಂತ ದೇಶವಾಸಿಗಳು ಸಂಗ್ರಹಿಸಿ ನೀಡುವ ಮಣ್ಣಿನಲ್ಲಿ ದೆಹಲಿಯಲ್ಲಿ ಅಮೃತ ವಾಟಿಕಾ(ಅಮೃತ ವನ) ವನ್ನು ನಿರ್ಮಿಸುವುದು ಕೇಂದ್ರ ಸರಕಾರದ ಯೋಜನೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗುವ ಭವ್ಯ ವನದಲ್ಲಿ ದೇಶದ ಪ್ರತಿಯೊಬ್ಬನ ಪಾಲೂ ಇರಬೇಕು ಮತ್ತು ಇದು ದೇಶವಾಸಿಗಳಿಗೆ ಅಭಿಮಾನದ ಸಂಕೇತವೂ ಹೌದು ಎಂಬ ಕಲ್ಪನೆಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಇಡೀ ದೇಶ ಒಂದು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಸಶಕ್ತ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂಬುದು ಮೋದಿಯವರ ಆಶಯ” ಎಂದಿದ್ದಾರೆ.

Previous articleಇದು ಸರ್ಕಾರದ ಅಸಹಾಯಕತೆಯೋ…
Next articleಕಾವೇರಿ ಕಿಚ್ಚು: ಮಂಗಳವಾರ ಬೆಂಗಳೂರು ಬಂದ್