ಧಾರವಾಡ ಜಿಲ್ಲೆ: ಕಾಂಗ್ರೆಸ್ ಮುನ್ನಡೆ

0
11
ಕಾಂಗ್ರೆಸ್‌

ಧಾರವಾಡ: ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ 4 ಕಡೆ ಕಾಂಗ್ರೆಸ್, 3 ಕಡೆ ಬಿಜೆಪಿ ಮುನ್ನಡೆ ಸಾಧಿಸಿವೆ.
ಜಿದ್ದಾಜಿದ್ದಿ ಕ್ಷೇತ್ರಗಳಾದ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸಂತೋಷ ಲಾಡ್, ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಅರ್. ಪಾಟೀಲ, ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಸಾದ್ ಅಬ್ಬಯ್ಯ, ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎನ್.ಎಚ್ ಕೋನರಡ್ಡಿ, ಹು- ಧಾ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ ಸತತ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಹು- ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಆರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಹಿನ್ನಡೆಯಲ್ಲಿದ್ದಾರೆ. ಸೆಂಟ್ರಲ್ ಕ್ಷೇತ್ರದಲ್ಲಿ 19 ಸುತ್ತು ಮತ ಎಣಿಕೆ ನಡೆಯಲಿದ್ದು, ಈಗ 6 ಸುತ್ತು ಮತ ಎಣಿಕೆ ಮುಕ್ತಾಯವಾಗಿದೆ.
ಕುಂದಗೋಳ ಕ್ಷೇತ್ರದಲ್ಲಿ ಹಾಲಿ ಶಾಸಕಿ ಕುಸುಮಾವತಿ, ನವಲಗುಂದ ಕ್ಷೇತ್ರದ ಅಭ್ಯರ್ಥಿ, ಹಾಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಆರಂಭದಿಂದಲೂ ಹಿನ್ನಡೆಯಲ್ಲಿದ್ದಾರೆ.
ಪೂರ್ವ ಕ್ಷೇತ್ರದಲ್ಲಿ ಡಾ. ಕ್ರಾಂತಿಕಿರಣ ಅವರೂ ಹಿನ್ನಡೆಯಲ್ಲಿದ್ದಾರೆ

Previous articleಮುನ್ನಡೆಯತ್ತ ಕಾಂಗ್ರೆಸ್‌ ಗರಿಗೆದರಿದ ಚಟುವಟಿಕೆ
Next articleಕಾಂಗ್ರೆಸ್‌ ಅಭ್ಯರ್ಥಿ ಎನ್.ಟಿ. ಶ್ರೀನಿವಾಸ್‌ ಗೆಲವು