ದ್ರಾಕ್ಷಿ ತುಂಬಿದ ವಾಹನ ಪಲ್ಟಿ

0
13

ವಾಡಿ: ಸಮೀಪದ ರಾವೂರ ಗ್ರಾಮದ ಹೊರವಲಯದಲ್ಲಿ ದ್ರಾಕ್ಷಿ ಹಣ್ಣು ತುಂಬಿದ ಬೋಲೊರ್ ವಾಹನ ಒಂದು ಪಲ್ಟಿಯಾದ ಘಟನೆ ನಡೆದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ಬಿಜಾಪುರದಿಂದ ದ್ರಾಕ್ಷಿ ಹಣ್ಣು ತುಂಬಿಕೊಂಡು ಆಂಧ್ರ ಪ್ರದೇಶದ ತಾಂಡೂರಗೆ ಸಾಗುವ ವೇಳೆ ರಾವೂರು ಹಾಗೂ ಚಿತ್ತಾಪುರ ಕ್ರಾಸ್ ಮಧ್ಯದ ರಾಷ್ಟ್ರೀಯ ಹೆದ್ದಾರಿ 150.ರ ಮೇಲೆ ಈ ಘಟನೆ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Previous articleಜಿಲ್ಲೆಯ ನಾಯಕರಿಗೆ ನಿಗಮ ಮಂಡಳಿ ಸ್ಥಾನ
Next articleಸ್ಕ್ಯಾನ್ ಮಾಡಿ, 10 ವರ್ಷಗಳ ಅಭಿವೃದ್ಧಿ ಕಾರ್ಯ ಓದಿ…