Home Advertisement
Home ಅಪರಾಧ ದೈಹಿಕ ಸಂಬಂಧ ಹೊಂದದ ಪತಿ ವಿರುದ್ಧ ಮಹಿಳೆ ದೂರು

ದೈಹಿಕ ಸಂಬಂಧ ಹೊಂದದ ಪತಿ ವಿರುದ್ಧ ಮಹಿಳೆ ದೂರು

0
88

ಭದೋಹಿ: ಮದುವೆಯಾದಾಗಿನಿಂದ ತನ್ನ ಜೊತೆ ಪತಿ ದೈಹಿಕ ಸಂಬಂಧ ಹೊಂದಿಲ್ಲ ಎಂದು ಉತ್ತರಪ್ರದೇಶದ ಮಹಿಳೆಯೊಬ್ಬರು ಭದೋಹಿ ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಿರುವ ಅಚ್ಚರಿಯ ಘಟನೆ ನಡೆದಿದೆ. ಈ ಸಂಬಂಧ ಪತಿ ಮತ್ತಾಕೆಯ ಏಳು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆ ೨೦೨೩ರ ಮೇ ೨೩ರಂದು ಜಗಜಿತ್ ಪಾಲ್ ಎಂಬಾತನನ್ನು ವಿವಾಹವಾಗಿದ್ದಾರೆ. ಮೊದಲ ರಾತ್ರಿಯೇ ಆತ ಆಕೆಯ ಬಳಿ ಬರಲು ನಿರಾಕರಿಸಿದ್ದ. ಆಯಾಸವಿರಬಹುದೆಂದು ಭಾವಿಸಿ ಅದನ್ನು ನಿರ್ಲಕ್ಷಿಸಿದರೂ ಆನಂತರ ಅದೇ ಪರಿಸ್ಥಿತಿ ನಿರಂತರವಾಗಿ ಮುಂದುವರಿಯಿತು. ಬೇರೊಬ್ಬ ಮಹಿಳೆಯೊಂದಿಗೆ ಆತ ಅಕ್ರಮ ಸಂಬಂಧ ಹೊಂದಿರುವುದು ಇದಕ್ಕೆ ಕಾರಣವೆಂದು ಮಹಿಳೆ ಆರೋಪಿಸಿದ್ದಾರೆ.

Previous articleಸಲ್ಮಾನ್‌ಗೆ ಬೆದರಿಕೆ ಹಾಕಿದ್ದ ಆರೋಪಿ ಹಾವೇರಿಯಲ್ಲಿ ಬಂಧನ
Next articleಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ