ದೇಶ ಇಬ್ಭಾಗ ಮಾಡಲು ಹೊರಟ ಖರ್ಗೆ

0
8

ಕೊಪ್ಪಳ: ಉತ್ತರ ಭಾರತದವರು ಈಶ್ವರ ಭಕ್ತರು ಮತ್ತು ದಕ್ಷಿಣ ಭಾರತದವರು ವಿಷ್ಣು ಭಕ್ತರು. ಇವರಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ತೋರಿಸಬೇಕು. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶವನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉತ್ತರ ಭಾರತದವರು ಈಶ್ವರ ಭಕ್ತರು ಮತ್ತು ದಕ್ಷಿಣ ಭಾರತದವರು ವಿಷ್ಣು ಭಕ್ತರು ಎನ್ನುವ ಹೇಳಿಕೆಯಿಂದ ಮಲ್ಲಿಕಾರ್ಜುನ ಖರ್ಗೆ ದೇಶವನ್ನು ಒಡೆಯಲು ಹೊರಟಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದು ಒಳ್ಳೆಯ ಸಂಸ್ಕೃತಿ ಅಲ್ಲ. ಇದು ಚುನಾವಣೆಯ ವಿಷಯ ಅಲ್ಲ. ಚುನಾವಣೆಯಲ್ಲಿ ಆರ್ಥಿಕ ಸುಧಾರಣೆ, ಶೈಕ್ಷಣಿಕ ರಂಗದಕ್ರಾಂತಿ ಮತ್ತು ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು. ದೇಶವನ್ನು ೫೬ ವರ್ಷಗಳ ಕಾಲ ಅಡಳಿತ ಮಾಡಿದ ಕಾಂಗ್ರೆಸ್‌ ಅಭಿವೃದ್ಧಿ ಕೆಲಸಗಳನ್ನು ಹೇಳುವ ಮೂಲಕ ಚುನಾವಣೆ ಎದುರಿಸಬೇಕು. ಚುನಾವಣೆಯ ವಿಷಯ ಬಿಟ್ಟು, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

Previous articleಮದುಮಕ್ಕಳನ್ನು ಬಿಡದ ಚುನಾವಣೆ ಪ್ರಚಾರದವರು !
Next articleಬಾಣಂತಿ, ಮಗು ಸಾವು: ಪ್ರತಿಭಟನೆ