Home Advertisement
Home ನಮ್ಮ ಜಿಲ್ಲೆ ಕೊಪ್ಪಳ ದೇವಿ ದರ್ಶನ ಪಡೆದ ಮಂಗ!

ದೇವಿ ದರ್ಶನ ಪಡೆದ ಮಂಗ!

0
109

ಕುಷ್ಟಗಿ: ಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ಮಂಗ ಒಂದು ಭಕ್ತರಂತೆ ಬಂದು ದೇವಿಯ ದರ್ಶನ ಪಡೆದಿದೆ.
ಎಂದಿನಂತೆ ದ್ಯಾಮವ್ವ ದೇವಿ ವಿಶೇಷ ಪೂಜೆಯ ಬಳಿಕ, ಭಕ್ತರು ದೇವಿಯ ದರ್ಶನ ಮಾಡುವ ವೇಳೆಯಲ್ಲಿ ಮಂಗ ದೇವಸ್ಥಾನದ ಗರ್ಭಗುಡಿಯ ಬಾಗಿಲ ಮೇಲೆ ಕೆಲ ಸಮಯ ಕುಳಿತು ಭಕ್ತರಿಗೆ ಆಶ್ಚರ್ಯ ಉಂಟು ಮಾಡಿತು.
ಗರ್ಭಗುಡಿ ಒಳಗೆ ಮಂಗ ಹೋಗಿ ದೇವಿಗೆ ಅಲಂಕರಿಸಲಾಗಿದ್ದ ಹೂವಿನ ಎಸಳು ತಿಂದ ಬಳಿಕ ಬಂದು ಕುಳಿತುಕೊಂಡಿತು. ಭಕ್ತರು ಕೋತಿಗೆ ಬಾಳೆಹಣ್ಣು ಕೊಡಲು ಮುಂದಾದರೆ ಬಾಳೆಹಣ್ಣು ಸ್ವೀಕರಿಸಲಿಲ್ಲ.
ಭಕ್ತರು ದ್ಯಾಮವ್ವ ದೇವಿಯ ಪವಾಡ ಎಂದು ಮಾತನಾಡಿಕೊಳ್ಳುತ್ತಿರುವುದು ಕಂಡುಬಂದಿತು. ದೇವಸ್ಥಾನಗಳಲ್ಲಿರುವಂತಹ ಮಂಗಗಳು ಭಕ್ತರು ತಂದಿದ್ದ ಪೂಜಾ ಸಾಮಗ್ರಿ ಮತ್ತು ಹಣ್ಣುಗಳನ್ನು ಕಿತ್ತುಕೊಂಡು ಹೋಗುವುದನ್ನು ಕಂಡಿದ್ದೇವೆ. ಆದರೆ, ಮಂಗ ದ್ಯಾಮವ್ವ ದೇವಿ ಗರ್ಭಗುಡಿ ಪ್ರವೇಶಿಸಿದರೂ ಯಾರಿಗೂ ತೊಂದರೆ ನೀಡಿಲ್ಲ.

Previous articleಕಾರ್ತಿಕ ಏಕಾದಶಿ: ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು
Next articleಧರಣಿಗೆ ವಿಜಯೇಂದ್ರ-ಅಶೋಕ ಏಕೆ ಬರಲಿಲ್ಲ?