ದೆಹಲಿ: ಸಿನಿಮಾ ಹಾಲ್‌ ಬಳಿ ಸ್ಫೋಟ

0
17

ನವದೆಹಲಿ: ರಾಜಧಾನಿಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ದೆಹಲಿಯ ಪ್ರಶಾಂತ್ ಬಿಹಾರದ ಪಿವಿಆರ್ ಸಿನಿಮಾ ಹಾಲ್ ಬಳಿ ಭಾರೀ ಸ್ಫೋಟ ಸಂಭವಿಸಿದ್ದು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಮಾಹಿತಿ ಪ್ರಕಾರ, ಪಿವಿಯರ್ ಬಳಿಯ ಫುಲಿ ಸೂಟ್ಸ್ ಬಳಿ ಸ್ಫೋಟ ಸಂಭವಿಸಿದೆ. ಪೊಲೀಸರಿಗೆ 11:48 ಕ್ಕೆ ಫೋನ್ ಕರೆ ಬಂದಿತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ, ಸ್ಫೋಟಕ್ಕೆ ಕಾರಣದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕರೆ ಮಾಡಿದ ವ್ಯಕ್ತಿ ಮತ್ತು ಸ್ಫೋಟದ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ವದಂತಿಗಳನ್ನು ಹಬ್ಬಿಸಬೇಡಿ ಮತ್ತು ಶಾಂತಿ ಕಾಪಾಡುವಂತೆ ಪೊಲೀಸರು ಜನರಿಗೆ ಮನವಿ ಮಾಡಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Previous articleರೇವಣ್ಣ ಈ ರೀತಿ ಹೇಳಿಕೆ ಯಾಕೆ ನೀಡಿದ್ದಾರೋ ಗೊತ್ತಿಲ್ಲ…
Next articleಆತಂಕ ಸೃಷ್ಟಿಸಿದ ಅನಾಮಧೇಯ ವ್ಯಕ್ತಿಯ ಸಂದೇಶ…