Home Advertisement
Home ನಮ್ಮ ಜಿಲ್ಲೆ ದೂರದೃಷ್ಟಿಯಿಲ್ಲದ ಬಜೆಟ್‌

ದೂರದೃಷ್ಟಿಯಿಲ್ಲದ ಬಜೆಟ್‌

0
86

ಬಜೆಟ್‌ ಒಂದು ಬಿಸಿಲು ಕುದುರೆಯಂತಿದೆ. ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ದೂರದೃಷ್ಟಿಯಿಲ್ಲದ ಬಜೆಟ್‌ ಆಗಿದೆ ಎಂದಿದ್ದಾರೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್‌ ಮಂಡಿಸಿದೆ ಎಂದು ಹೇಳಿಕೊಳ್ಳಲು ಒಂದು ಪ್ರತಿಯನ್ನು ಮನೆಯಲ್ಲಿ ಇಟ್ಕೊಬಹುದು. ಪ್ರತಿ ಮಹಿಳೆಗೆ 2ಸಾವಿರ ರೂ. ನೀಡುವುದಾಗಿ ದೊಡ್ಡದಾಗಿ ಜಾಹೀರಾತು ನೀಡಿದ್ದ ಬಿಜೆಪಿ ಸರ್ಕಾರ ಅದನ್ನು 500 ರೂಪಾಯಿಗೆ ಮೊಟಕುಗೊಳಿಸಿದ್ದು ಏಕೆ? ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ, ಬೆಲೆ ಏರಿಕೆಗೆ ಪರಿಹಾರ, ಕಾರ್ಮಿಕರು, ಉದ್ಯೋಗದಾತರನ್ನು ಉಳಿಸುವ ಪ್ರಯತ್ನ ಖಂಡಿತ ಮಾಡಿಲ್ಲ. ಒಟ್ಟಿನಲ್ಲಿ ಇದು ಕನ್ನಡಿಗರನ್ನು ಮೂರ್ಖರನ್ನಾಗಿಸುವ ಬಜೆಟ್‌ ಆಗಿದೆ ಎಂದರು.

Previous articleಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್: ಶೆಟ್ಟರ್
Next articleಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ನಿ ನಿಧನ