ಮಂಗಳೂರು: ರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ೧೦ ದಿನ ಕಳೆದರೂ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರಿಂದ ಪತ್ತೆಕಾರ್ಯ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಬೇಕು ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ. ದಿಂಗತ್ ಪತ್ತೆಯಾಗದಿರಲು ಪೊಲೀಸರ ವೈಪಲ್ಯ ಅಥವಾ ಬೇರೆ ಕಾರಣ ಇರಬಹುದು. ಮೂಡುಬಿದಿರೆ ಸಮೀಪವೂ ನಿತೇಶ್ ಎಂಬ ಹುಡುಗ ನಾಪತ್ತೆಯಾಗಿದ್ದು, ೨೦ ದಿನ ಕಳೆದರೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಿ ಶುಕ್ರವಾರ ತಿಳಿಸಲಾಗುವುದು ಎಂದರು.