ದರೋಡೆ ಪ್ರಕರಣ: ಕಾಲಿಗೆ ಗುಂಡೇಟು ತಿಂದ ಆರೋಪಿ ವಿರುದ್ಧ 54 ಪ್ರಕರಣ

0
8

ದಾವಣಗೆರೆ: ದರೋಡೆ ಪ್ರಕರಣದಲ್ಲಿ ಬುಧವಾರ ರಾತ್ರಿ ಕಾಲಿಗೆ ಗುಂಡೇಟು ತಿಂದಿ ಆರೋಪಿ ವಿರುದ್ಧ ರಾಜ್ಯ, ಹೊರ ರಾಜ್ಯ ಸೇರಿ ವಿವಿಧೆಡೆ 54 ಪ್ರಕರಣಗಳು ದಾಖಲಾಗಿವೆ ಎಂದು
ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ನಗರದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ೨೫೦ ಗ್ರಾಂ ಚಿನ್ನ, ೧ ಕೆ.ಜಿ. ಬೆಳ್ಳಿ ಕಳುವು ಮಾಡಿದ್ದ ತುಮಕೂರು ಜಿಲ್ಲೆಯ ಪಿ.ಗೊಲ್ಲರಹಳ್ಳಿಯ ನವೀನ್(೩೩) ಎಂಬ ಆರೋಪಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದರು.
ವಿಚಾರಣೆಗೆ ಒಳಪಡಿಸಿದಾಗ ಈತನ ವಿರುದ್ಧ 54 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ೩೧ ಪ್ರಕರಣಗಳು ವಿಚಾರಣೆ ಬಾಕಿ ಇವೆ. ೨೦೧೬ರಲ್ಲಿ ಸರಗಳ್ಳತನ, ದೇವಸ್ಥಾನ ಕಳ್ಳತನ, ಡಕಾಯಿತಿ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ೩ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ನಾವು ೧೧ ಪ್ರಕರಣ ಬೇಧಿಸಿದ್ದು, ಚಿತ್ರದುರ್ಗದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ, ಚಿತ್ರಹಳ್ಳಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ, ಹಿರಿಯೂರು ಪಟ್ರೇಹಳ್ಳಿಯಲ್ಲಿ ದನ ಕಾಯುತ್ತಿದ್ದ ಮಹಿಳೆಯರ ಮೇಲೆ ದಾಳಿ ನಡೆಸಿ ಬಲವಂತವಾಗಿ ಸರಗಳ್ಳತನ ಮಾಡಿದ್ದ. ೨೦೨೫ರಲ್ಲಿ ಶ್ರೀರಾಂಪುರದಲ್ಲಿ ಹಸು ಮೇಯಿಸುವಾಗ ಅಜ್ಜಿಗೆ ಒಡೆದು ಸರ ಕಿತ್ತಿದ್ದ. ಅಲ್ಲದೇ ಆಂಧ್ರಪ್ರದೇಶದ ರತ್ನಗಿರಿ ಜಿಲ್ಲೆಯ ಪಂಪ್‌ಹೌಸ್‌ನಲ್ಲಿ ಕುಳಿತ ಹುಡುಗಿಯ ತಲೆಗೆ ಒಡೆದು ಕಿವಿಯೊಲೆ, ಸರಗಳ್ಳತನ ಮಾಡಿದ್ದು, ಒಂಟಿ ಮಹಿಳೆಯರ ಮೇಲೆ ದಾಳಿ ನಡೆಸಿ ಚಿನ್ನಾಭರಣ ಕೀಳುವುದೇ ಈತನ ಗುರಿಯಾಗಿತ್ತು ಎಂದು ಮಾಹಿತಿ ನೀಡಿದರು.

Previous articleಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ: ಐವರ ಬಂಧನ, 220 ಗ್ರಾಂ ಬಂಗಾರ ವಶ
Next articleವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ