ದಬ್ಬಾಳಿಕೆಯನ್ನು ನೋಡಿಕೊಂಡು ಕೂರುವಷ್ಟು ಹೇಡಿಗಳು ಕನ್ನಡಿಗರಲ್ಲ

0
34

ಬೆಂಗಳೂರು: ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನೋಡಿಕೊಂಡು ಕೂರುವಷ್ಟು ಹೇಡಿಗಳು ಕನ್ನಡಿಗರಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬೆಂಗಳೂರಿನ ನಗರ ಪೇಟೆಯಲ್ಲಿ ಮೊಬೈಲ್ ಅಂಗಡಿ ಮಾಲೀಕ ಮುಖೇಶ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಹೋರಾಟ ಮಾಡಿದ ಬಿಜೆಪಿ ನಾಯಕರನ್ನು ಬಂಧಿಸುವ ಹೇಡಿತನ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಪ್ರದರ್ಶನ ಮಾಡಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನೋಡಿಕೊಂಡು ಕೂರುವಷ್ಟು ಹೇಡಿಗಳು ಕನ್ನಡಿಗರಲ್ಲ. ಮತಾಂಧರನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು! ಎಂದಿದ್ದಾರೆ.

Previous articleವಿರಾಟ್ ವಿಬಿನ್ನ ಲುಕ್‌ನಲ್ಲಿ
Next articleಸಿಎಎಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ