Home Advertisement
Home ತಾಜಾ ಸುದ್ದಿ ತೆಲಂಗಾಣ: ರೈಲು ಹರಿದು 60 ಮೇಕೆಗಳು ಸಾವು

ತೆಲಂಗಾಣ: ರೈಲು ಹರಿದು 60 ಮೇಕೆಗಳು ಸಾವು

0
120

ಹೈದರಾಬಾದ್: ರೈಲಿನಡಿಗೆ ಸಿಲುಕಿ 60 ಮೇಕೆಗಳು ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಕಾರಾಬಾದ್ ಜಿಲ್ಲೆಯ ಧಾರೂರ್ ಮಂಡಲದ ಡೋರ್ನಾಲ್ ಗ್ರಾಮದಲ್ಲಿ ಕಿಷ್ಟಪ್ಪ ಎಂಬವರಿಗೆ ಸೇರಿದ ಸುಮಾರು 60 ಮೇಕೆಗಳು ರೈಲ್ವೇ ಹಳಿಯನ್ನು ದಾಟುತ್ತಿದ್ದವು. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ 60 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.