ತುಳು ಲಿಪಿಯಲ್ಲಿ ಗೀತಾ ಲೇಖನ

ಸಂ.ಕ. ಸಮಾಚಾರ, ಉಡುಪಿ: ಇಲ್ಲಿನ‌ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತ ಮಹಾಪಾಠಶಾಲೆಯ ಉಪನ್ಯಾಸಕ ಡಾ.ರಾಧಾಕೃಷ್ಣ ಭಟ್ ಬೆಂಗ್ರೋಡಿ ತುಳು ಲಿಪಿಯಲ್ಲಿ ಭಗವದ್ಗೀತೆ ಬರೆದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಸಮರ್ಪಿಸಿದರು.
ಅವರನ್ನು ಪರ್ಯಾಯ ಶ್ರೀಪಾದರು ವಿಶೇಷವಾಗಿ ಅಭಿನಂದಿಸಿದ̧ರು ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಇದ್ದರು.