ಕೊಪ್ಪಳ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿದ್ದು, ನದಿಗೆ ಸಾಕಷ್ಟು ನೀರು ಹರಿದುಹೋಗುತ್ತಿದೆ. ಈ ನಡುವೆ ಮೊಸಳೆ ಪ್ರತ್ಯಕ್ಷವಾಗಿರುವುದು ಕುತೂಹಲ ಮೂಡಿಸಿದೆ.
ಕೊಪ್ಪಳದಿಂದ ಹೊಸಪೇಟೆಗೆ ಹೋಗುವ ಮಾರ್ಗದಲ್ಲಿರುವ ೨ನೇ ಸೇತುವೆ ಬಳಿ ಮೊಸಳೆಯು ನದಿಯ ಕಲ್ಲು ಬಂಡೆಯ ಮೇಲೆ ಮಲಗಿತ್ತು. ಬಹಳಷ್ಟು ಜನರು ಶಬ್ಧ ಮಾಡಿದರೂ ಕೂಡಾ ಯಾವುದಕ್ಕೂ ಕಿವಿಗೊಡದೇ ಹಾಗೇ ಮಲಗಿತ್ತು. ನೆರದಿದ್ದ ಜನರು ಕುತೂಹಲದಿಂದ ಮೊಸಳೆಯನ್ನು ವೀಕ್ಷಿಸಿದರು.