ಬೆಂಗಳೂರು: ನಾಳೆ ಉಡಾವಣೆಯಾಗಲಿರುವ ಚಂದ್ರಯಾನ-3 ಯಶಸ್ವಿಯಾಗಲೆಂದು ತಿರುಪತಿ ದೇಗುಲದಲ್ಲಿ ಇಸ್ರೋ ವಿಜ್ಞಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ 3 ಉಡಾವಣೆ ನಾಳೆ ಶುಕ್ರವಾರ ಮಧ್ಯಾಹ್ನ 2:35ಕ್ಕೆ ನಡೆಯಲಿದೆ. ಚಂದ್ರಯಾನ-3 ಅನ್ನು ಎಲ್‌ಎಂವಿ3 ರಾಕೆಟ್ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುತ್ತದೆ.