ಚಿಕ್ಕೋಡಿ: ಮಾರಕಾಸ್ತ್ರಗಳಿಂದ ಹೊಡೆದು ತಾಯಿ-ಮಗನನ್ನು ಕೊಂದ ಘಟನೆ ನಡೆದಿದೆ,
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಡಿ.4ರ ಬುಧವಾರ ರಾತ್ರಿ ಘಟನೆ ನಡೆದಿದೆ, ತಾಯಿ ಮಂಗಲ ನಾಯಿಕ, ೪೨ ಪ್ರಜ್ವಲ ನಾಯಿಕ, ೧೮ ಮೃತಪಟ್ಟವರು, ಕೊಲೆಯಾದ ಕೆಲವೇ ಗಂಟೆಯಲ್ಲಿ ನಿಪ್ಪಾಣಿ ಪೋಲಿಸ್‌ರು ಪ್ರಕರಣ ಭೇಧಿಸಿದ್ದಾರೆ, ಕೊಲೆ ಮಾಡಿದ ಆರೋಪಿ ರವಿಯನ್ನು ನಿಪ್ಪಾಣಿ ಪೋಲಿಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಮೃತ ಮಂಗಲ ನಾಯಿಕ ಮಗಳಾದ ಪ್ರಾಜಕ್ತಾ ಮದುವೆ ಮಾಡಿಕೊಡಿ ಎಂದು ಆರೋಪಿ ರವಿ ಕಾಡಿಸುತ್ತಿದ್ದ, ಮಗಳನ್ನು ಮದುವೆ ಮಾಡಿ ಕೊಡುವುದಿಲ್ಲ ಎಂದು ಮಂಗಲ ನಾಯಿಕ ವಿರೋಧ ಮಾಡಿದ್ದಾರೆ, ಇದರಿಂದ ಸಿಟ್ಟಾದ ಆತ ತನ್ನ ಗೆಳೆಯರೊಂದಿಗೆ ಬಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.