ತಲಪಾಡಿ ಚೆಕ್‌ಪೋಸ್ಟ್‌: ದಾಖಲೆ ಇಲ್ಲದ 7.9 ಲಕ್ಷ ರೂ. ವಶಕ್ಕೆ

0
13
ಹಣ

ಮಂಗಳೂರು: ದಾಖಲೆ ಪತ್ರ ರಹಿತವಾಗಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 7.9 ಲಕ್ಷ ರೂ. ನಗದು ಮೊತ್ತವನ್ನು ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ
ಚುನಾವಣಾಧಿಕಾರಿಗಳು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾಸರಗೋಡಿನಿಂದ ಮಂಗಳೂರಿಗೆ ಕಾರಿನಲ್ಲಿ ಈ ಮೊತ್ತವನ್ನು ಸಾಗಾಟ ಮಾಡಲಾಗುತ್ತಿತ್ತು. ಕಾರನ್ನು ಚೆಕ್‌ಪೋಸ್ಟ್‌ನಲ್ಲಿ ತಡೆದು ತಪಾಸಣೆ ನಡೆಸಿದಾಗ 7.9 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಬಗ್ಗೆ ಕಾರಿನಲ್ಲಿ ಇದ್ದವರನ್ನು ಅಧಿಕಾರಿಗಳು ಪ್ರಶ್ನಿಸಿದಾಗ, ಮಂಗಳೂರಿನ ಬಂದರಿಗೆ ಸಾಮಗ್ರಿ ಖರೀದಿಗೆ ಆಗಮಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಸೂಕ್ತ ದಾಖಲೆಪತ್ರ ಇಲ್ಲದ ಕಾರಣ ಮೊತ್ತವನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

Previous articleಮೊಗವೀರರಿಗೆ ಟಿಕೆಟ್‌ ನೀಡದಿದ್ದರೆ ಚುನಾವಣೆಯಲ್ಲಿ ನಿಷ್ಕ್ರೀಯ: ಎಚ್ಚರಿಕೆ
Next articleನಾಳೆ ಪೊಲೀಸ್ ಧ್ವಜ ದಿನಾಚರಣೆ