ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ

0
33

ಹುಬ್ಬಳ್ಳಿ: ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಕೊಬ್ಬು ಇತ್ಯಾದಿ ವಸ್ತುಗಳು ಪತ್ತೆಯಾಗಿರುವ ಕುರಿತಂತೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ತುಪ್ಪ ಬಂದ್ ಮಾಡಿಸಿದ ನಂತರ ಈ ತರಹದ ವಸ್ತುಗಳನ್ನು ಲಡ್ಡು ತಯಾರಿಕೆಗೆ ಬಳಸಲಾಗುತ್ತಿದೆ. ಹಿಂದಿನ ಆಂಧ್ರ ಪ್ರದೇಶದ ಸರ್ಕಾರ ಹಾಗೂ ಕಾಂಗ್ರೆಸ್‌ನವರ ಹಿಂದು ವಿರೊಧಿ ನೀತಿಯಿಂದ ಈ ರೀತಿಯಾಗುತ್ತಿದೆ ಎಂದರು. ಪ್ರಸಾದ ವಿತರಣೆಯಲ್ಲಿ ಆಯಾ ಸರ್ಕಾರಗಳು ಮೂಗು ತೂರಿಸದೇ ದೇವಸ್ಥಾನದ ಆಡಳಿತ ಮಂಡಳಿಯವರು ಅದರ ಕುರಿತು ನಿರ್ಧಾರ ಮಾಡಿ ಪರಿಶೀಲಿಸಬೇಕು. ದೇಶದ ನಂಬಿಕೆ, ಸಂಸ್ಕೃತಿ, ಶ್ರದ್ಧೆಯನ್ನು ಹಾಳು ಮಾಡಬಾರದು ಎಂದು ಹೇಳಿದರು.

Previous articleಸೊಸೈಟಿ ಮೂಲಕ ಹೊರಗುತ್ತಿಗೆ ನೌಕರರ ಪೂರೈಕೆ
Next articleಬಿಜೆಪಿಯಿಂದ ವಿಷ ಬೀಜ ಬಿತ್ತುವ ಕಾರ್ಯ