Home Advertisement
Home ತಾಜಾ ಸುದ್ದಿ ತಡವಾಗಿದ್ದಕ್ಕೆ ಕ್ಷಮೆ ಕೇಳಿದ ಮೋದಿ

ತಡವಾಗಿದ್ದಕ್ಕೆ ಕ್ಷಮೆ ಕೇಳಿದ ಮೋದಿ

0
147

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡದಲ್ಲಿ ಬಿಜೆಪಿ ಸಮಾವೇಶಕ್ಕೆ ಆಗಮಿಸಲು ತಡವಾಗಿದ್ದಕ್ಕೆ ವೇದಿಕೆಯಲ್ಲಿ ತಮ್ಮ ಭಾಷಣಕ್ಕೂ ಮುನ್ನ ಬಹಿರಂಗ ಕ್ಷಮೆ ಕೇಳಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತ ಮಾತಾ ಕೀ ಜೈ ಎಂಬ ಘೋಷಣೆಯೊಂದಿಗೆ ಎಂದಿನ ಶೈಲಿಯಲ್ಲಿ ಮಾತಿಗೆ ಶುರುವಿಟ್ಟುಕೊಂಡರು.
ವೀರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವಣ್ಣನವರಿಗೆ ನಮಸ್ಕಾರಗಳು, ಬೆಳಗಾವಿಯ ನನ್ನ ಸಮಸ್ತ ಜನರಿಗೆ ಮೋದಿ ಮಾಡುವ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ನೆರೆದವರ ಚಪ್ಪಾಳೆ ಗಿಟ್ಟಿಸಿದರು.
ಭಾಷಣಕ್ಕೂ ಮುನ್ನ ಒಮ್ಮೆ, ಭಾಷಣ ಮುಗಿಸುವಾಗ ಮೂರು ಬಾರಿ ಭಜರಂಗ ಬಲೀ ಕೀ ಜೈ ಎಂದು ವೇದಿಕೆಯ ಮೇಲಿನಿಂದಲೇ ಮೋದಿಯವರು ಜೋರಾಗಿ ಘೋಷಣೆ ಕೂಗಿದ್ದು ವಿಶೇಷವಾಗಿತ್ತು.