ತಂದೆಯಾದ ಬುಮ್ರಾ: ಏಷ್ಯಾಕಪ್‌ನ ಪಂದ್ಯಗಳಿಗೆ ಅಲಭ್ಯ

0
19

ಮುಂಬೈ: ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ದಂಪತಿ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಜಸ್‌ಪ್ರೀತ್ ಬುಮ್ರಾ ಅವರು ತಂದೆಯಾದ ಸಂಭ್ರದಲ್ಲಿದ್ದಾರೆ. ಪತ್ನಿ ಸಂಜನಾ ಗಣೇಶನ್ ಅವರು ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಈ ವಿಚಾರವನ್ನು ಬುಮ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಏಷ್ಯಾಕಪ್‌ನಲ್ಲಿ ಆಡುತ್ತಿದ್ದ ಬುಮ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ನೇಪಾಳ ವಿರುದ್ಧ ಸೋಮವಾರ ನಡೆಯಬೇಕಿದ್ದ ಪಂದ್ಯಕ್ಕೆ ಒಂದು ದಿನ ಮುನ್ನ ಟೂರ್ನಿಯನ್ನು ಮೊಟಕುಗೊಳಿಸಿ ದೇಶಕ್ಕೆ ವಾಪಸ್ ಆಗಿದ್ದಾರೆ.

Previous articleಕಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ನೊವಾಕ್ ಜೋಕೊವಿಕ್
Next articleಶ್ರೀನಾಥ್‌ಗೆ ರೆಫ್ರಿಯಾಗಿ ೨೫೦ನೇ ಪಂದ್ಯ