ತಂದೆ ಸಾವಿನ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ

0
9
ತಂದೆ ಸಾವು

ಹುಕ್ಕೇರಿ: ತಾಲೂಕಿನ ಕೇಸ್ತಿ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೋರ್ವಳ ತಂದೆ ಗುರುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು ವಿದ್ಯಾರ್ಥಿಯ ಮನವೊಲಿಸಿದ ಶಿಕ್ಷಕರು ಇಂದು ಆಕೆಯನ್ನು ಪರೀಕ್ಷೆಗೆ ಹಾಜರಾಗುವಂತೆ ಮಾಡಿದರು.
ಅಬ್ದುಲರಜಾಕ್ ಸನದಿ ಎನ್ನುವವರು ಗುರುವಾರ ರಾತ್ರಿ 2.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಳಿಕ ಶಿಕ್ಷಕರು, ಮುಖ್ಯೋಪಾಧ್ಯಾಯರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಆಕೆಗೆ ಧೈರ್ಯ ತುಂಬಿ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ್ದಾರೆ. ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಆ ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು.

Previous articleಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಖೂಬಾ
Next articleಅಭ್ಯರ್ಥಿ ಆಯ್ಕೆಗೆ ಬಿಜೆಪಿ ಆಂತರಿಕ ಚುನಾವಣೆ