ಸಂ. ಕ. ಸಮಾಚಾರ, ಉಜಿರೆ: ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೇ ೩೦ರಂದು ಮೃತಪಟ್ಟಿದ್ದಾನೆ. ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ, ಬಂಟ್ವಾಳ ತಾಲೂಕಿನ ಕಿನ್ನಿಬೆಟ್ಟು ಅಮ್ಟಾಡಿ ಗ್ರಾಮದ ಗೋಪಾಲ ಗೌಡ ಮತ್ತು ಸುಪ್ರಭಾ ದಂಪತಿ ಪುತ್ರ ಹಿತೇಶ್ (೧೭ ) ಮೃತ ವಿದ್ಯಾರ್ಥಿನಿ. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಈತ ಪ್ಲೇಟ್‌ಲೆಟ್ ಕಡಿಮೆಯಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.