ಡೆಂಗ್ಯೂ ಪ್ರಕರಣಗಳ ಸಾರ್ವಕಾಲಿಕ ದಾಖಲೆ

0
20

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ೧೯, ೬೬೪ಕ್ಕೆ ಏರಿದ್ದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
೨೦೨೩ರಲ್ಲಿ ಕರ್ನಾಟಕದಲ್ಲಿ ೯,೩೧೩ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಹಿಂದಿಕ್ಕಿರುವ ಡೆಂಗ್ಯೂ ಸೊಳ್ಳೆಗಳು ೧೯,೬೬೪ ಮಂದಿಗೆ ಹಬ್ಬುವ ಮೂಲಕ ನೂತನ ದಾಖಲೆ ನಿರ್ಮಿಸಿವೆ. ಸಾವಿನ ಪ್ರಕರಣಗಳಲ್ಲಿ ಕಳೆದ ವರ್ಷದ ಅತ್ಯಧಿಕ ಹತ್ತು ಮಂದಿಯ ಸಂಖ್ಯೆಯನ್ನು ಈ ವರ್ಷ ಈಗಾಗಲೇ ಸಮಗಟ್ಟಿದೆ.ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೧೨೧ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಹರಡುವಿಕೆಯ ಪ್ರಮಾಣ ಕ್ಷೀಣಿಸುತ್ತಿರುವುದು ಸಮಾಧಾನದ ಸಂಗತಿ. ಬೆಂಗಳೂರಿನಲ್ಲಿ ೪೧, ಕಲಬುರಗಿಯಲ್ಲಿ ೨೪ ಪ್ರಕರಣಗಳು ದೃಢಪಟ್ಟಿವೆ.

Previous articleದೇವಸ್ಥಾನದಲ್ಲಿ ವಿದ್ಯುತ್ ತಗುಲಿ ಮಹಿಳೆಯರಿಬ್ಬರ ದಾರುಣ ಸಾವು
Next articleಷೇರುಪೇಟೆಯಲ್ಲಿ ರಕ್ತದೋಕುಳಿ